
ಪ್ರಜಾವಾಣಿ ವಾರ್ತೆ
ನವದೆಹಲಿ, ಡಿ. 30 (ಯುಎನ್‌ಐ)– ಬಾಬ್ರಿ ಮಸೀದಿಯ ಧ್ವಂಸ ‘ಒಂದು ದೊಡ್ಡ ಪ್ರಮಾದ’ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರು, ಇಂದು ಇಲ್ಲಿ ಒಪ್ಪಿಕೊಂಡಿದ್ದಾರೆ.
‘ಸ್ಟಾರ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅಡ್ವಾಣಿ ಅವರು ಮಸೀದಿ ಧ್ವಂಸವನ್ನು ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕತ್ವದ ವೈಫಲ್ಯ ಎಂದು ಬಣ್ಣಿಸಿದ್ದಾರೆ.
ಮಸೀದಿ ನಾಶದ ಕೆಲವೇ ದಿನಗಳಲ್ಲಿ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಅವರು, ‘1992ರ ಡಿಸೆಂಬರ್ ಆರನ್ನು ನನ್ನ ಜೀವನದ ಅತೀದುಃಖದ ದಿನ’ ಎಂದು ಬಣ್ಣಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ಆರ್‌ಎಸ್‌ಎಸ್ ತನ್ನ ಸದಸ್ಯರಲ್ಲಿ ಸದಾ ಶಿಸ್ತು ತುಂಬಲು ಪ್ರಯತ್ನಿಸುತ್ತದೆ. ಆದರೆ, ಆ ಒಂದು ದಿನ ಎಲ್ಲಾ ಶಿಸ್ತು ಮಣ್ಣು ಪಾಲಾಯಿತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.