ADVERTISEMENT

ಶುಕ್ರವಾರ, 8–7–1994

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST
   

ಬೆಂಗಳೂರು, ಜುಲೈ 7– ವಿಶ್ವದಲ್ಲೇ ಅತಿ ದೊಡ್ಡದೆನ್ನಲಾದ ಹೃದ್ರೋಗಿಗಳ ಪ್ರತ್ಯೇಕ ಆಸ್ಪತ್ರೆಯು ನಗರದ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯು ಈ ಬೃಹತ್ ಯೋಜನೆ ಕೈಗೆತ್ತಿಕೊಂಡಿದೆ.

ಸುಮಾರು 13.32 ಎಕರೆ ಭೂಮಿಯಲ್ಲಿ 31 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಬೃಹತ್ ಸಂಕೀರ್ಣ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ಅಂದಾಜು 18 ಕೋಟಿ ರೂಪಾಯಿ ವೆಚ್ಚದಲ್ಲಿ 274 ಹಾಸಿಗೆಗಳ ಸೌಲಭ್ಯ
ವಿರುತ್ತದೆ. ಎರಡನೇ ಹಂತದಲ್ಲಿ 135 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ
ಡಾ. ಎಂ.ಗುರಪ್ಪ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ಟಿ.ಎನ್. ನರಸಿಂಹಮೂರ್ತಿ ವಿಧಾನ ಪರಿಷತ್ ಹಂಗಾಮಿ ಸಭಾಪತಿ

ADVERTISEMENT

ಬೆಂಗಳೂರು, ಜುಲೈ 7– ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿ ಹಿರಿಯ ಸದಸ್ಯ ಟಿ.ಎನ್. ನರಸಿಂಹಮೂರ್ತಿ ಅವರನ್ನು ರಾಜ್ಯಪಾಲ ಖುರ್ಷಿದ್‌ ಆಲಂ ಖಾನ್ ನೇಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.