ಬೆಂಗಳೂರು, ಅ.9: ಮುಷ್ಕರವನ್ನು ಕೊನೆಗಾಣಿಸಿ ಹಿಂದೂಸ್ಥಾನ್ ವಿಮಾನ ಕಾರ್ಖಾನೆ ಕೆಲಸಗಾರರು ಇಂದು ಕೆಲಸಕ್ಕೆ ಹಿಂದಿರುಗಿದರು. ಮುಷ್ಕರ ಸಂಬಂಧದಲ್ಲಿ ಬಂಧಿಸಲ್ಪಟ್ಟವರು ಇಂದು ಸಂಜೆ ಬಿಡುಗಡೆಯಾಗಿದ್ದರು. ನಗರದಲ್ಲಿ ಜಾರಿಯಲ್ಲಿದ್ದ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಯಿತು.
ನವದೆಹಲಿ, ಅ.9– ದೆಹಲಿಯ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಸಾದಾರ್ ಬಜಾರಿನ ಹೊಜೈರಿ ಪೇಟೆಯಲ್ಲಿ ಭಾರಿ ಬೆಂಕಿ ಹೊತ್ತಿ ಅನೇಕ ಕೋಟಿ ರೂ.ಗಳಷ್ಟು ಆಸ್ತಿ ಭಸ್ಮವಾಯಿತು. ರಾತ್ರಿ 8 ಗಂಟೆಗೆ ಹೊತ್ತಿದ ಬೆಂಕಿ ಮಧ್ಯರಾತ್ರಿಯಲ್ಲೂ ಶಮನವಾಗಲಿಲ್ಲ. 11 ಅಗ್ನಿ ನಿರೋಧಕ ಯಂತ್ರಗಳು ಬೆಂಕಿ ನಂದಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.