ADVERTISEMENT

25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ವಿಜಾಪುರ, ಫೆ. 17– ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಟ್ಟಿರುವ ನೀರು ಇಂದು ಸಂಜೆ ಸುಮಾರು 4.30ರ ವೇಳೆಗೆ ಜಿಲ್ಲೆಯ ಇಂಡಿ ತಾಲ್ಲೂಕಿನ ಗಡಿಯಲ್ಲಿರುವ ಟಾಕಳಿ ಸೇತುವೆಗೆ ತಲಪಿ ಮುಂದೆ ಹರಿದಿದ್ದು, ಇದನ್ನು ಕಣ್ಣಾರೆ ಕಂಡ ರೈತರು ಆಮರಣ ನಿರಶನವನ್ನು ಅಂತ್ಯಗೊಳಿಸಿದರು.

ಇಂದು ಮುಂಜಾನೆ ಭೀಮಾ ನದಿ ನೀರು ಟಾಕಳಿ ಸೇತುವೆಗೆ ಸಮೀಪದ ಮಹಾರಾಷ್ಟ್ರದ ಔಟ್‌–ಶಿರನಾಳ ಬ್ಯಾರೇಜ್‌ ತಲಪಿತ್ತು. ಅಧಿಕೃತ ಮೂಲಗಳ ಪ್ರಕಾರ ಈ ಬ್ಯಾರೇಜ್‌ನಿಂದ ಹರಿವಿನ ಪ್ರಮಾಣ 600–700 ಕ್ಯುಸೆಕ್ ಇತ್ತು.

ADVERTISEMENT

ಗೇರುಸೊಪ್ಪಾದಲ್ಲಿ ವಿದ್ಯುತ್‌ ಘಟಕ ಕಾರ್ಯಾರಂಭ

ಜೋಗ್‌ಫಾಲ್ಸ್‌, ಫೆ. 17– ಇಲ್ಲಿಗೆ ಸಮೀಪದ ಗೇರುಸೊಪ್ಪಾದಲ್ಲಿ ಶರಾವತಿ ಟೇಲ್‌ರೇಸ್‌ ಯೋಜನೆಯ 60 ಮೆಗಾವಾಟ್‌ ಸಾಮರ್ಥ್ಯದ ಮೊದಲ ವಿದ್ಯುತ್‌ ಉತ್ಪಾದನಾ ಘಟಕವನ್ನು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ರಾಮಲಿಂಗಂ ಅವರು, ಶುಕ್ರವಾರ ಮಧ್ಯಾಹ್ನ ಉದ್ಘಾಟಿಸಿದರು.

ನಿಗದಿತ ಅವಧಿಗೆ ಆರು ತಿಂಗಳು ಮುಂಚಿತವಾಗಿ ಯೋಜನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.