ನವದೆಹಲಿ, ಜುಲೈ 27– ತೆಂಗಿನಕಾಯಿ ಮತ್ತು ಕೊಬ್ಬರಿಯ ಆಮದಿನ ಮೇಲೆ ನಿಯಂತ್ರಣ ಹೇರಿ ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೀಡಾಗಿರುವ ರೈತರನ್ನು ರಕ್ಷಿಸಬೇಕೆಂದು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಸಂಸತ್ ಸದಸ್ಯರು ಇಂದು ಕೃಷಿ ಸಚಿವ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಬೆಂಗಳೂರು, ಜುಲೈ 27– ಕ್ರಿಕೆಟ್ ಮೋಸದಾಟದ ಪ್ರಕರಣದಲ್ಲಿ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ನಗರದ ಎಂಟು ಮತ್ತು ಚೆನ್ನೈನ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ದಾಖಲೆಗಳನ್ನು ಮತ್ತು ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಮೋಸದಾಟದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಅವರ ತಾರಾ ಪತ್ನಿ ಸಂಗೀತಾ ಬಿಜಲಾನಿಗೆ ಸೇರಿದ ಮನೆ ಹಾಗೂ ಡೊಮಿನಿಯನ್ ಕ್ಲಬ್ ಮಾಲೀಕ ಸುರೇಶ್ ಜೈನ್ ಅವರಿಗೆ ಸೇರಿದ ಮೂರು ಸ್ಥಳಗಳು ಇದರಲ್ಲಿ ಸೇರಿವೆ. ಆದರೆ, ಇದರಲ್ಲಿ ಯಾವುದೇ ಕ್ರಿಕೆಟ್ ಆಟಗಾರರ ಮನೆ ಸೇರಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.