
ಪ್ರಜಾವಾಣಿ ವಾರ್ತೆ
ಬೆಂಗಳೂರು, ಜ. 25– ‘ಹಿಂದಿನ ವರ್ಷಗಳ ಕಲಾವಿದರನ್ನು ಗುರ್ತಿಸಲು ಸರ್ಕಾರ ಹೊರಟಿರುವುದು ನಿಜಕ್ಕೂ ಒಂದು ಸಾಧನೆಯೇ’ ಎಂದು ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (86) ಅವರು ಪ್ರತಿಕ್ರಿಯಿಸಿದ್ದಾರೆ. ದೇವರ ದಯೆಯಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ಸೂಚಿಸಿದ್ದಾರೆ.
ತಮ್ಮೊಂದಿಗೆ ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರೂ ಪ್ರಶಸ್ತಿ ಹಂಚಿಕೊಂಡಿರುವುದಕ್ಕೆ ತಮಗೆ ಅತೀವ ಹರ್ಷವಾಗಿದೆ ಎಂದು ಶಹನಾಯಿ ಮಾಂತ್ರಿಕ ಖಾನ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.