ADVERTISEMENT

75 ವರ್ಷಗಳ ಹಿಂದೆ: ಕಾವೇರಿ ನದಿಯಲ್ಲಿ ಹುಚ್ಚು ಹುಚ್ಚು ಪ್ರವಾಹ

ಪ್ರಜಾವಾಣಿ ವಿಶೇಷ
Published 30 ಜುಲೈ 2025, 0:17 IST
Last Updated 30 ಜುಲೈ 2025, 0:17 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಕಾವೇರಿ ನದಿಯಲ್ಲಿ ಹುಚ್ಚು ಹುಚ್ಚು ಪ್ರವಾಹ

ಬೆಂಗಳೂರು, ಜುಲೈ 29– ಅನಾವೃಷ್ಟಿಯ ಮುಸುಕಿನಿಂದ ಹೊರಬಿದ್ದ ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ ಮತ್ತು ಕಪಿಲ ನಿನ್ನೆಯಿಂದ ತಮ್ಮ ಮುಂದೆ ಅತಿವೃಷ್ಟಿಯ ತೆರೆಯನ್ನೆಳೆದು ನಿಂತಿವೆ.

ಬತ್ತಿಹೋದ ಕನ್ನಂಬಾಡಿಯಿಂದ ಉಂಟಾಗಿದ್ದ ಜನತೆಯ ಕೋಪವನ್ನು ಶಮನ ಮಾಡಲಿರಬೇಕು. ಕೃಷ್ಣರಾಜಕಟ್ಟೆಯ ಎಲ್ಲಾ ಬಾಗಿಲುಗಳನ್ನು ತೆಗೆಸಿ ಬೃಂದಾವನವನ್ನು ಮುಳುಗಿಸಿ, ದಾರಿಯುದ್ದಕ್ಕಿರುವ ಸೇತುವೆಗಳ ಮಟ್ಟಕ್ಕೆ ಹರಿಯುತ್ತಾ, ಅಲ್ಲಲ್ಲಿ ಸಂಚಾರಕ್ಕೆ ಅಡ್ಡಿ ತಂದು, ಪ್ರಾಣ ರಕ್ಷಣೆಗಾಗಿ ಓರ್ವನನ್ನು ಈಚಲು ಮರಕ್ಕೇರಿಸಿ– 1924ರ ಹುಚ್ಚು ಪ್ರವಾಹವನ್ನು ಜ್ಞಾಪಕಕ್ಕೆ ತರುತ್ತಿದೆ.

ADVERTISEMENT

ಆಗಸ್ಟ್‌ 1ರಿಂದ ಅರ್ಧ ಔನ್ಸ್ ಹೆಚ್ಚು ಆಹಾರ

ಬೆಂಗಳೂರು, ಜುಲೈ 29– ಆಗಸ್ಟ್‌ 1ನೇ ತಾರೀಕಿನಿಂದ ಸಂಸ್ಥಾನದ ಎಲ್ಲಾ ರೇಷನ್‌ದಾರರಿಗೂ ಅರ್ಧ ಔನ್ಸ್‌ ಹೆಚ್ಚಿಗೆ ಆಹಾರ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.