ಶಿರಾ, ಅ. 6- ಎಮ್ಮೆಗಳನ್ನು ಮೇಯಿಸಲು ಹೋದ ಮೂವರು ಮಕ್ಕಳು ಜಲಸಮಾಧಿ ಆಗಿರುವ ದಾರುಣ ಘಟನೆ ಬುಕ್ಕಾಪಟ್ಣ ಹೋಬಳಿಯ ಬಾಳಾಪುರ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.
ಮಕ್ಕಳು ಬಾಳಾಪುರ ಕೆರೆಯಲ್ಲಿ ಎಮ್ಮೆಗಳಿಗೆ ನೀರು ಕುಡಿಸಲು ಹೋದರು. ಎಮ್ಮೆಗಳು ನೀರಿನಲ್ಲಿ ಎಳೆದುಕೊಂಡು ಹೋಗಿದ್ದರಿಂದ ಮುಳುಗಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಕ್ಷ್ಮಮ್ಮ (14), ನಾಗರಾಜು (12) ಮತ್ತು ದೊಡ್ಡಯ್ಯ (12) ಮೃತರು.
ನವದೆಹಲಿ, ಅ. 6– ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರಲಿರುವ ವಿಶ್ವಬ್ಯಾಂಕ್ ನೆರವಿನ ಸುಮಾರು ಆರು ಸಾವಿರ ಕೋಟಿ ರೂ. ಅಂದಾಜು ವೆಚ್ಚದ ವಿದ್ಯುತ್ ಪುನರ್ ರಚನೆ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.