
ಪ್ರಜಾವಾಣಿ ವಾರ್ತೆ
ಲೇಕ್‌ಸಕ್ಸಸ್, ಜ. 20– ಕೊರಿಯದ ಸಮಸ್ಯೆ ಬಗ್ಗೆ ಪೀಕಿಂಗಿನೊಡನೆ ಒಪ್ಪಂದಕ್ಕೆ ಬರುವ ಮಾರ್ಗವನ್ನು ಪರಿಶೀಲಿಸಲು ಕೆಲವು ಅರಬ್ ಮತ್ತು ಏಷ್ಯನ್ ರಾಷ್ಟ್ರಗಳು ಇಂದು ಕಡೇಘಳಿಗೆ ಯತ್ನ ಮಾಡಿದವು.
ಚೀನಾದ ಧೋರಣೆ ಖಂಡನೀಯವೆಂದು ಸಮಿತಿಯ ಬಹುಮತಾಭಿಪ್ರಾಯ ನಿರ್ಧಾರ ವಾದುದಾದರೂ ಚೀನಾ ವಿರೋಧವಾಗಿ ಯಾವ ರೀತಿ ಪ್ರತಿಬಂಧಕಗಳನ್ನು ಜಾರಿಗೆ ತರಬೇಕೆಂಬ ವಿಷಯದಲ್ಲಿ ಏಕಾಭಿಪ್ರಾಯವಿರಲಿಲ್ಲ.
ವಿಶ್ವಸಂಸ್ಥೆಯು ಮಂಡಿಸುವ ನಿರ್ಣಯದಲ್ಲಿ ಆಕ್ರಮಣಕಾರಿ ರಾಷ್ಟ್ರಕ್ಕೆ ವಿರೋಧವಾಗಿ ಸಾಮೂಹಿಕ ಪ್ರತಿಬಂಧಕ ಹಾಕಲು ಅಮೆರಿಕ ಒತ್ತಾಯಪಡಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.