ಮಂಗಳೂರು, ಅ. 5- ದಕ್ಷಿಣ ಕನ್ನಡ ಸೇರಿದಂತೆ ದೇಶದ 58 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 375 ಕೋಟಿ ರೂ. ವೆಚ್ಚದ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.
ಪ್ರಧಾನ ಮಂತ್ರಿಗಳ ಗ್ರಾಮೋದಯ ಅಭಿವೃದ್ಧಿ ಯೋಜನೆ ಯಡಿ ಒಟ್ಟು 375 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 40 ಕೋಟಿ ಪೈಕಿ 11 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಬೆಂಗಳೂರು, ಅ. 5- ಕರ್ನಾಟಕ ಸಹಕಾರ ಕಾಯ್ದೆ (30ಎ) ವಿಧಿಗೆ ತರಲಿರುವ ತಿದ್ದುಪಡಿಯನ್ನು ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಸಮರ್ಥಿಸಿ ಕೊಂಡರಲ್ಲದೆ, ಸಹಕಾರ ಸಂಸ್ಥೆಗಳು ಪಡೆದಿರುವ 1900 ಕೋಟಿ ರೂ.ಸಾಲಕ್ಕೆ ಸರ್ಕಾರ ಖಾತ್ರಿ ನೀಡಿದ್ದು, ದುರುಪಯೋಗ ತಡೆಗೆ ನಿಯಂತ್ರಣ ಅಧಿಕಾರ ಅಗತ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.