ADVERTISEMENT

25 ವರ್ಷಗಳ ಹಿಂದೆ: ಕ್ರಿಕೆಟ್‌ ಆಟಗಾರರ ಮನೆ ಮೇಲೆ ತೆರಿಗೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಜುಲೈ 20– ಮೋಸದಾಟದ ಹಗರಣ ಬಯಲಿಗೆ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ವಿವಿಧೆಡೆ ಪ್ರತಿಷ್ಠಿತ ಕ್ರಿಕೆಟ್‌ ಆಟಗಾರರು, ಕ್ರಿಕೆಟ್‌ ಆಡಳಿತಗಾರರು, ತರಬೇತುದಾರರು ಮತ್ತು ಬುಕಿಗಳ ನೂರಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿ ‘ಅನೇಕ ಮಹತ್ವದ ದಾಖಲೆ’ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಚಾರವನ್ನು ಇಂದು ಸಂಜೆ ಇಲ್ಲಿ ತುರ್ತಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ ಕೇಂದ್ರ
ಹಣಕಾಸು ಖಾತೆ ರಾಜ್ಯ ಸಚಿವ ವಿ. ಧನಂಜಯ ಕುಮಾರ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರಾದ ಕಪಿಲ್‌ದೇವ್‌, ಅಜರುದ್ದೀನ್‌, ಹಾಲಿ ಆಟಗಾರರಾದ ಅಜಯ್‌ ಜಡೇಜಾ, ನಿಖಿಲ್‌ ಚೋಪ್ರಾ ಮತ್ತು ವಿಕೆಟ್‌ ಕೀಪರ್‌ ನಯನ್‌ ಮೋಂಗಿಯಾ, ಅಜಯ್‌ ಶರ್ಮ, ನವಜೋತ್‌ ಸಿಧು ಅವರಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಹಿಂದಿನ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಮತ್ತು ಭಾರತ ಕ್ರಿಕೆಟ್‌ ಮಂಡಳಿಯ ಖಜಾಂಚಿ ಕಿಶೋರ್‌ ರುಂಗ್ಟಾ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ತಪಾಸಣೆ ಮಾಡಲಾಯಿತು ಎಂದು ಬಹಿರಂಗಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT