ಮೆಲ್‌ಬೋರ್ನ್, ಅ. 16– ಚೆಂಡು ವಿಕೆಟ್‌ಗಳಿಗೆ ತಗುಲಿ ಔಟಾದ ಆಸ್ಟ್ರೇಲಿಯಾದ ಟೆಸ್ಟ್ ಆಟಗಾರ ನೇಯಿಲ್ ಹಾರ್ವೆಗೆ ಬೇಲ್‌ಗಳು ಆಕಾಶದಲ್ಲಿ ಹಾರಿ ಮತ್ತೆ ಸ್ವಸ್ಥಾನ ಸೇರಿ ‘ಜೀವದಾನ’ ಮಾಡಿದವು.
ಜಿಲ್ಲಾ ಕ್ರಿಕೆಟ್ ಪಂದ್ಯದಲ್ಲಿ ಅವರು 17 ರನ್ನು ಮಾಡಿದಾಗ, ಡಿಲಾನ್ ಅವರು ಬೌಲ್ ಮಾಡಿದ ಚೆಂಡು ಮಧ್ಯದ ವಿಕೆಟ್‌ಗೆ ಹೊಡೆಯಿತು. ವಿಕೆಟ್ ಮೇಲೆ ಇಡಲಾಗಿದ್ದ ಎರಡು ಬೇಲ್‌ಗಳೂ ಆಕಾಶಕ್ಕೆ ಹಾರಿ ಮತ್ತೆ ವಿಕೆಟ್ ಮೇಲೆ ಇರುವ ಗುಳಿಗಳ ಮೇಲೇ ಬಿದ್ದು ನಿಂತುಬಿಟ್ಟವು!
ಔಟಾದೆನೆಂದು ಭಾವಿಸಿದ ಹಾರ್ವೆ ಪೆವಿಲಿಯನ್ ದಾರಿ ಹಿಡಿದಿದ್ದಾಗ ಅಂಪೈರ್‌ಗಳು ಆತನನ್ನು ಹಿಂದಕ್ಕೆ ಕರೆದು ‘ನೀನು ಔಟಾಗಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.