
ಪ್ರಜಾವಾಣಿ ವಾರ್ತೆ
ಹರಿಹರ, ಡಿ. 25– ಕನ್ನಡ ಚಿತ್ರರಂಗದ ಖಳನಟ ಹಾಗೂ ಹಾಸ್ಯನಟ ಆಗಿ ಹೆಸರು ಗಳಿಸಿದ್ದ ಧೀರೇಂದ್ರ ಗೋಪಾಲ್ (59) ಇಂದು ಬೆಳಿಗ್ಗೆ 11.45ಕ್ಕೆ ಹರಿಹರದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.
ಕುಂದಾಪುರದಲ್ಲಿ ‘ಅಂಜಲಿ ಗೀತಾಂಜಲಿ’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಧೀರೇಂದ್ರ ಕೆಲಕಾಲ
ದಿಂದ ಅಸ್ವಸ್ಥರಾಗಿದ್ದರೂ ಚೇತರಿಸಿಕೊಂಡು ಮತ್ತೆ ಚಿತ್ರರಂಗದತ್ತ ಮರಳಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ನನ್ನವಳು ನನ್ನವಳು’ ಚಿತ್ರದಲ್ಲಿ ತಮ್ಮ ಎಂದಿನ ಹಾಸ್ಯ, ರಂಜನೆ ಮಾತುಗಾರಿಕೆ ಮೂಲಕ ಮನಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.