
ಪ್ರಜಾವಾಣಿ ವಿಶೇಷ
ಡಿಸೆಂಬರ್‌ನಿಂದ ವಿದ್ಯುತ್ ವಿತರಣೆ ಖಾಸಗೀಕರಣ
ಬೆಂಗಳೂರು, ಸೆಪ್ಟೆಂಬರ್ 18– ವಿದ್ಯುತ್ ವಿತರಣೆ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳಿನಿಂದ ಖಾಸಗೀಕರಣ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಇಂಧನ ಖಾತೆ ರಾಜ್ಯ ಸಚಿವ ವೀರಕುಮಾರ ಪಾಟೀಲ ಇಂದು ಇಲ್ಲಿ ತಿಳಿಸಿದರು.
ಹಂತ ಹಂತವಾಗಿ ವಲಯ ಮಟ್ಟದಲ್ಲಿ ಈ ಖಾಸಗೀಕರಣ ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದರು.
ದರೋಡೆ: ನಗ–ನಾಣ್ಯ ಲೂಟಿ
ಬೆಂಗಳೂರು, ಸೆಪ್ಟೆಂಬರ್ 18– ಶಾಲಾ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಏಳು ಮಂದಿ ಡಕಾಯಿತರ ತಂಡ ಮನೆಯಲ್ಲಿದ್ದವರಿಗೆ ಮಾರಕಾಸ್ತ್ರ ಗಳಿಂದ ಬೆದರಿಸಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ನಗ–ನಾಣ್ಯ ಲೂಟಿ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಭಾನುವಾರ ನಡೆದಿದೆ.ಮಾರುತಿ ಬಡಾವಣೆಯ ಶಿಕ್ಷಕಿ ಭಾಗ್ಯ ಅವರ ಮನೆಯಲ್ಲಿ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.