ADVERTISEMENT

25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:30 IST
Last Updated 16 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಡಿ. 16– ಕನ್ನಡೇತರ ಚಿತ್ರ ಪ್ರದರ್ಶಕರು ಹಾಗೂ ವಿತರಕರಿಗೆ ಈಗ ‘ಸಂಕಷ್ಟ ಮಾಸ’. ಒಂದೆಡೆ ರಂಜಾನ್‌ ಹಬ್ಬ, ಇನ್ನೊಂದೆಡೆ ಅಯ್ಯಪ್ಪ ವ್ರತ. ಪ್ರೇಕ್ಷಕರಿಲ್ಲದೆ ಸಿನಿಮಾ
ಮಂದಿರಗಳು ಖಾಲಿ ಹೊಡೆಯುತ್ತಿವೆ. ಸರಾಸರಿ ಕಲೆಕ್ಷನ್‌ ಶೇ 50ಕ್ಕೂ ಕಡಿಮೆಯಾಗಿದೆ. ಕನ್ನಡೇತರ ಚಿತ್ರಗಳಿಗೆ ಸರ್ಕಾರ ವಿಧಿಸಿರುವ ಶೇ 80ರಷ್ಟು ಮನರಂಜನಾ ತೆರಿಗೆ ಕೂಡ ಪ್ರೇಕ್ಷಕರ ನಿರುತ್ಸಾಹಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮನರಂಜನಾ ತೆರಿಗೆ ಹೆಚ್ಚಿದಷ್ಟೂ ಅದನ್ನು ನೇರವಾಗಿ ಪ್ರೇಕ್ಷಕನ ಮೇಲೆ ಹೊರಿಸಲಾಗುತ್ತದೆ.

‘ಸರ್ಕಾರದ ಆದ್ಯತೆ ರಾಷ್ಟ್ರೀಯ ಕಾರ್ಯಸೂಚಿಗೆ, ಅಯೋಧ್ಯೆಗಲ್ಲ’

ಹುಬ್ಬಳ್ಳಿ, ಡಿ. 16– ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಥಮ ಆದ್ಯತೆ ಮೈತ್ರಿ ಪಕ್ಷಗಳು ಒಪ್ಪಿದ ರಾಷ್ಟ್ರೀಯ ಕಾರ್ಯಸೂಚಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಯೇ ಹೊರತು, ಅಯೋಧ್ಯಾ ಸೇರಿದಂತೆ ಬಿಜೆಪಿಗೆ ಪ್ರಿಯವಾದ ಯಾವುದೇ ವಿವಾದಾಸ್ಪದ ವಿಷಯಕ್ಕಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂದು ಇಲ್ಲಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.