
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಭಾನುವಾರ, 18–2–1951: ನಿವೃತ್ತ ಸೈನಿಕರ ಪುನರ್ ವ್ಯವಸ್ಥೆ
ಬೆಂಗಳೂರು, ಫೆ. 17– ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಬಿ’ ವಿಭಾಗದ ಸಂಸ್ಥಾನಗಳ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ನಿವೃತ್ತ ಸೈನಿಕರ ಪುನರ್ ವ್ಯವಸ್ಥೆಯ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದ ಮೈಸೂರು ಸರಕಾರ, ಈ ತಿಂಗಳ ಅಂತ್ಯದೊಳಗೆ ಅಥವಾ ಮುಂದಿನ ತಿಂಗಳ ಆದಿಯಲ್ಲಿ ಈ ಸಂಬಂಧದಲ್ಲಿ ವಿವರವಾದ ಯೋಜನೆಯೊಂದನ್ನು ತಯಾರಿಸಿ ಕೇಂದ್ರಕ್ಕೆ ಕಳುಹಿಸಿಕೊಡುವುದು.
ಇಂದು ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಲಿನ ಅಂಶ ತಿಳಿಸಿದ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರು, ‘ಪುನರ್ ವ್ಯವಸ್ಥೆಯ ಕ್ರಮಗಳ ಬಗ್ಗೆ ಅಂತಿಮ ನಿರ್ಧಾರಗಳಿಗೆ ಬರುವವರೆಗೆ ನಿವೃತ್ತಿಗೊಳಿಸುವುದನ್ನು ನಿಲ್ಲಿಸಬೇಕೆಂದು ಕೇಂದ್ರಕ್ಕೆ ಸಲಹೆ ಮಾಡಲಾಗಿದೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.