
ಪ್ರಜಾವಾಣಿ ವಾರ್ತೆಬೆಂಗಳೂರು, ಡಿ. 22– ಭಾರತದ ಇತಿಹಾಸದಲ್ಲೇ ಪ್ರಥಮವಾಗಿ ಇಂದು ಬೆಂಗಳೂರು ಕಾರ್ಪೊರೇಷನ್ ಚುನಾವಣೆಯಲ್ಲಿ ವಯಸ್ಕರು ಮತದಾನ ಮಾಡುವರು. ಸ್ವತಂತ್ರ ಭಾರತದಲ್ಲಿ ಈ ಪ್ರಯೋಗ ಪ್ರಥಮವಾಗಿ ದೊರೆತಿರುವ ಪುಣ್ಯವಂತ ಪೌರರ ಆನಂದಕ್ಕೆ ಕೊನೆಮೊದಲೇ ಇಲ್ಲ.
ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ತಿಳಿ ಗುಲಾಬಿ ಬಣ್ಣದ ಹಾಗೂ ಕಾರ್ಮಿಕ ಕ್ಷೇತ್ರಗಳಲ್ಲಿ ಬೂದು ಬಣ್ಣದ ಓಟಿನ ಚೀಟಿಗಳು; ಹಳದಿ, ಕೆಂಪು, ನೀಲಿ, ಹಸುರು ಮತ್ತು ಬಿಳುಪು ಬಣ್ಣದ ಪೆಟ್ಟಿಗೆಗಳಲ್ಲಿ ಬಂದು ಭದ್ರವಾಗಿ ಬೀಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.