ನವದೆಹಲಿ, ಸೆಪ್ಟೆಂಬರ್ 23– ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಬೆಲೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಇಂದು ತಾತ್ವಿಕವಾಗಿ ಒಪ್ಪಿಗೆ ನೀಡಿದರೂ, ಈ ಕುರಿತ ಅಧಿಕೃತ ಪ್ರಕಟಣೆ ವಿಳಂಬವಾಗುವ ಸಾಧ್ಯತೆಯಿದೆ.
ಅಮೆರಿಕ ತನ್ನ ತೈಲನಿಧಿಯಿಂದ ಕಚ್ಚಾತೈಲವನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಇಳಿಯುವ ಸೂಚನೆ ಇಂದು ವ್ಯಕ್ತವಾಗಿರುವುದು ಮತ್ತು ಮುಂಬರುವ ದಿನಗಳಲ್ಲಿ ಹಬ್ಬಗಳಿರುವುದರಿಂದ ಸರ್ಕಾರ ಕೆಲವು ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಸೆಮಿಫೈನಲ್‌ಗೆ ಬೀನಾ ಮೋಳ್
ಸಿಡ್ನಿ, ಸೆಪ್ಟೆಂಬರ್ 23– ಭಾರತದ ಬೀನಾಮೋಳ್ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಇಂದು ಮಹಿಳಾ 400 ಮೀಟರ್ಸ್ ಓಟದ ಸೆಮಿಫೈನಲ್ ತಲುಪಿದರು. ಅಮೆರಿಕದ ಮಾರಿಸ್ ಗ್ರೀನ್ ಮತ್ತು ಮರಿಯನ್ ಜೋನ್ಸ್ ವಿಶ್ವ ವೇಗದ ರಾಜ–ರಾಣಿಯರೆನಿಸಿಕೊಂಡರು.
ಹಾಕಿಯಲ್ಲಿ ಭಾರತದ ಆಟಗಾರರು ಸ್ಫೇನ್ ವಿರುದ್ಧ 3–2 ಗೋಲುಗಳಿಂದ ಗೆಲುವು ಸಾಧಿಸಿ, ಸೆಮಿಫೈನಲ್ ತಲಪುವ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.