ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಭಾನುವಾರ, 19–11–1995

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 19:30 IST
Last Updated 18 ನವೆಂಬರ್ 2020, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ವಿದ್ಯುತ್‌ ಖೋತಾ ರದ್ದಿಗೆ ಆಗ್ರಹ ‌

ಬೆಂಗಳೂರು, ನ. 18– ರಾಜ್ಯದಲ್ಲಿ ಸಣ್ಣ ಉದ್ಯಮ ಘಟಕಗಳ ಮೇಲೆ ಹೇರಲಾದ ಶೇಕಡ 30 ವಿದ್ಯುತ್‌ ಖೋತಾವನ್ನು ಈ ತಿಂಗಳ 20ಕ್ಕೆ ಮುನ್ನ ರದ್ದುಪಡಿಸಬೇಕು ಎಂದು ಸಣ್ಣ ಉದ್ಯಮಗಳ ಸಂಘ (ಕಾಸಿಯಾ) ಇಂದು ರಾಜ್ಯ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿತು.

ಅರ್ಧದಷ್ಟು ‘ಪುರಸ್ಕರಿಸಲಾಗದ’ ಅರ್ಜಿ– ಮಾಮೂಲಿ ಷರಾ ವಿಲೇವಾರಿ

ADVERTISEMENT

ಮಡಿಕೇರಿ: ‘ವರದಿ ಬಂದಿಲ್ಲ’, ‘ಜಾಗ ಲಭ್ಯವಿಲ್ಲ’, ‘ಮನವಿ ಪರಿಗಣನೆಗೆ ಅರ್ಹವಲ್ಲ’, ‘ನಿಯಮದ ಪ್ರಕಾರ ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ’, ‘ಸೂಕ್ತ ಹಿಂಬರಹ ನೀಡಿ ಮುಕ್ತಾಯಗೊಳಿಸಲಾಗಿದೆ’, ‘ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಮುಕ್ತಾಯಗೊಳಿಸಲಾಗಿದೆ’.

ಇವು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರಿಗೆ ಜನತಾದರ್ಶನದ ವೇಳೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಂದ ಅರ್ಧಕ್ಕೂ ಹೆಚ್ಚು ಅರ್ಜಿಗಳಿಗೆ ಅಧಿಕಾರಶಾಹಿ ನೀಡಿರುವ ‘ಹಣೆಬರಹ’ಗಳ ಸ್ಯಾಂಪಲ್‌.

ರಾಜಧಾನಿ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ‘ಜನತಾದರ್ಶನ’ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸುವ ಉದ್ದೇಶದಿಂದ ತಮ್ಮ ಸಚಿವ ಸಹೋದ್ಯೋಗಿ ದಂಡಿನ ಜತೆ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡರು ಕೈಗೊಂಡ ‘ದಂಡಯಾತ್ರೆ’ ಇದೀಗ ನಾಲ್ಕು ತಿಂಗಳು ಮುಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.