
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ
ಬೆಂಗಳೂರು, ಜ. 1– ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ದಿನ ಮಧ್ಯಾಹ್ನ 3 ಗಂಟೆ 25 ನಿಮಿಷಕ್ಕೆ ದೆಹಲಿಯಿಂದ ಮುಂಬಯಿ ಮೂಲಕ ಬೆಂಗಳೂರಿನ ಹಿಂದೂಸ್ತಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ವಿಮಾನ ನಿಲ್ದಾಣದಿಂದ ರೆಸಿಡೆನ್ಸಿವರೆಗಿನ ಸುಮಾರು 6 ಮೈಲಿ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ಗಂಡಸರು, ಹೆಂಗಸರು, ಮಕ್ಕಳು, ಮಧ್ಯಾಹ್ನ ಎರಡು ಗಂಟೆಯಿಂದ ಬಿಸಿಲಿನಲ್ಲಿ ಕಾದು ನಿಂತಿದ್ದು, ಜವಾಹರರ ದರ್ಶನ ಲಾಭಕ್ಕಾಗಿ ಕಾತರಭರಿತರಾಗಿದ್ದರು. ಬೆಂಗಳೂರಿನ ಈಚಿನ ಇತಿಹಾಸ ದಲ್ಲಿ ಹಿಂದೆ ಒಂದೇ ಒಂದು ಬಾರಿಇಷ್ಟು ಅಗಾಧ ಜನಸಂದಣಿ ಕಂಡು ಬಂದಿತ್ತು. ಅದು ಯಾವಾಗ ಎಂದರೆ ಕಳೆದ ಸಾರಿ– ಒಂದು ವರ್ಷದ ಕೆಳಗೆ– ನೆಹರೂ ಬೆಂಗಳೂರಿಗೆ ಬಂದಿದ್ದಾಗ... ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.