ಬಳ್ಳಾರಿ, ಅ. 13– ಮೈಸೂರು ಸಂಸ್ಥಾನದ ಜೋಗ್ ವಿದ್ಯುತ್ ಕೇಂದ್ರದಿಂದ ಹುಬ್ಬಳ್ಳಿಗೆ ವಿದ್ಯುಚ್ಛಕ್ತಿ ಸರಬರಾಜು ಲೈನನ್ನು ಹಾಕುವ ಬಗ್ಗೆ ಬೊಂಬಾಯಿ ಸರ್ಕಾರದಿಂದ ಔಪಚಾರಿಕ ಮನವಿ ಬಂದಲ್ಲಿ ಆ ವಿಚಾರವನ್ನು ಮೈಸೂರು ಸರ್ಕಾರ ಪರಿಶೀಲಿಸುವುದೆಂಬುದಾಗಿ ಮೈಸೂರಿನ ವಿದ್ಯುತ್ ಶಾಖಾ ಸಚಿವರಾದ ಕೆ.ಟಿ. ಭಾಷ್ಯಂರವರು ಕರ್ನಾಟಕದ ವರ್ತಕರ ಸಂಘದ ನಿಯೋಗವೊಂದಕ್ಕೆ ತಿಳಿಸಿದ್ದರೆಂದು ವರದಿಯಾಗಿದೆ.
ಅರಮನೆಯಲ್ಲಿ ಪತ್ರಗಳ ಕಳವು
ಲಂಡನ್, ಅ. 13– ಬ್ರಿಟನ್ನಿನ ದೊರೆ ವಾಸಿಸುವ ಬಕಿಂಗ್‌ಹ್ಯಾಂ ಅರಮನೆಯಲ್ಲಿ ರಾಯಭಾರ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳು ನಿನ್ನೆ ರಾತ್ರಿ ಕಳುವಾಗಿವೆ.
ಬೀದಿಯ ಪಕ್ಕದಲ್ಲಿದ್ದ ಕಸದ ಡಬ್ಬಿ ಯೊಂದರಲ್ಲಿ ರಾಯಭಾರ ಪತ್ರಗಳ ರವಾನೆ ಮಾಡುವ ಪೆಟ್ಟಿಗೆ ಸಿಕ್ಕಿದೆ. ಈ ಕಾಗದ ಪತ್ರಗಳು ಅರಮನೆಯ ಮಾರ್ಷಲ್ಲರ ಕೋಣೆಯಿಂದ ಕಳುವಾದುವೆಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.