
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೊಂಬಾಯಿ, ಡಿ. 24– ನಮ್ಮ ಭಾಷೆಯಲ್ಲದೆ ಇತರ ಭಾರತೀಯ ಭಾಷೆಗಳೆಲ್ಲದರ ಬಗ್ಗೆ ಜ್ಞಾನ
ಪಡೆದಿರಬೇಕಾದುದು ನಮ್ಮ ವಿದ್ಯಾಭ್ಯಾಸದ ಭಾಗವಾಗಿರಬೇಕು. ಇದರಿಂದ ಮಾತ್ರ ಪ್ರತ್ಯೇಕತಾಭಾವ ಗಳನ್ನು, ಪ್ರಾಂತೀಯ ಮನೋಭಾವಗಳನ್ನು ತೊರೆದು ಸೌಹಾರ್ದ ಮನೋಭಾವ ಮತ್ತು ರಾಷ್ಟ್ರೀಯ ಸಂಘಟನೆಗಳನ್ನು ಪಡೆಯಲು ಸಾಧ್ಯ ಎಂದು ಕೇಂದ್ರದ ವಾರ್ತಾ ಸಚಿವ ರಂಗನಾಥ ರಾಮಚಂದ್ರ ದಿವಾಕರ ಅವರು, ಕನ್ನಡ ಸಾಹಿತ್ಯ ಸಮ್ಮೇಳನದ 34ನೇ ಅಧಿವೇಶನವನ್ನು ಉದ್ಘಾಟಿಸುತ್ತ ಈ ದಿನ ಇಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.