ಇಸ್ಲಾಮಾಬಾದ್, ಜುಲೈ 30 (ಪಿಟಿಐ)– ಕಾಶ್ಮೀರದಲ್ಲಿ ಕದನ ವಿರಾಮ ಘೋಷಿಸಿ ಮಾತುಕತೆಗೆ ಮುಂದಾಗಿರುವ ಪಾಕಿಸ್ತಾನಿ ಮೂಲದ ಉಗ್ರಗಾಮಿ ಸಂಘಟನೆ ಹಿಜಬುಲ್ ಮುಜಾಹಿದ್ದೀನ್, ಭಾರತದ ಜತೆ ನವದೆಹಲಿಯಲ್ಲಿ ಮಾತುಕತೆ ನಡೆಸಲು ತನ್ನ ಮೂವರು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಶಾಂತಿ ಸಂಧಾನಕ್ಕೆ ದೃಢಹೆಜ್ಜೆ ಇಟ್ಟಿದೆ.
ಆದರೆ, ಉದ್ದೇಶಿತ ಮಾತುಕತೆಗೆ ಸಿದ್ಧವಾಗಲು ಗಡಿ ನಿಯಂತ್ರಣ ರೇಖೆಯ ಎರಡೂ ಕಡೆಗಿರುವ ತನ್ನ ನಾಯಕರನ್ನು ಭೇಟಿಯಾಗಿ ಮಾತುಕತೆಯ ವಿಧಿ ವಿಧಾನ ಮತ್ತು ಕಾರ್ಯತಂತ್ರದ ಬಗೆಗೆ ಪೂರ್ವಭಾವಿ ಚರ್ಚಿಸಲು ಭಾರತ ಅವಕಾಶ ಕಲ್ಪಿಸಿಕೊಡಬೇಕು ಎಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ನಾಯಕ ಸಲಾಹುದ್ದೀನ್ ಇಂದು ರಾತ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.