ADVERTISEMENT

50 ವರ್ಷಗಳ ಹಿಂದೆ: ಗುರುವಾರ, ಆಗಸ್ಟ್‌ 27, 1970

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 15:40 IST
Last Updated 26 ಆಗಸ್ಟ್ 2020, 15:40 IST
   

ಕೇರಳ ತರುಣಿಯರ ಮಾರಾಟ ಪ್ರಕರಣ: ಸಮಗ್ರ ತನಿಖೆಗೆ ಸರ್ಕಾರದ ಆಜ್ಞೆ

ನವದೆಹಲಿ, ಆ. 26 – ಬಲಾತ್ಕಾರವಾಗಿ ಸನ್ಯಾಸಿನಿಯರನ್ನಾಗಿ ಮಾಡಲು ಕೇರಳ ಮತ್ತಿತರ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ತರುಣಿಯರನ್ನು ಯುರೋಪಿನಲ್ಲಿನ ಕಾನ್ವೆಂಟುಗಳಿಗೆ ಮಾರಾಟ ಮಾಡಲಾಗುತ್ತಿದೆಯೆಂಬ ವರದಿಗಳ ಬಗ್ಗೆ ಸಮಗ್ರ ರೀತಿಯ ತನಿಖೆಯೊಂದಕ್ಕೆ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ ಎಂದು ವಿದೇಶಾಂಗ ಸಚಿವ ಶ್ರೀ ಸ್ವರಣ್‌ ಸಿಂಗ್‌ ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ಆದರೆ, ತರುಣಿಯರ ಮಾರಾಟದ ವರದಿಗಳಿಂದ ಭಾವೋದ್ವೇಗಪೂರಿತರಾದ ಸದಸ್ಯರು ಅನೇಕ ಬಾರಿ ಕಟು ಟೀಕೆ ವ್ಯಕ್ತಪಡಿಸಿ ತಮ್ಮ ತೀವ್ರ ಕೋಪ, ಅಸಮಾಧಾನವನ್ನು ವ್ಯಕ್ತಪಡಿಸಿದರು.

ADVERTISEMENT

ಸಿಕ್ಕಿಂ ಗಡಿಯಲ್ಲಿ ಚೀನಿ ಕ್ಷಿಪಣಿ ಪ್ರಯೋಗ ಕೇಂದ್ರ

ನವದೆಹಲಿ, ಆ. 26– ಚೀನಾ– ಸಿಕ್ಕಿಂ ಗಡಿಯ ಚೀನಿ ಭಾಗದಲ್ಲಿ ಕ್ಷಿಪಣಿ ಹಾರಿಸುವ ಕೇಂದ್ರಗಳನ್ನು ಚೀನಾವು ಸ್ಥಾಪಿಸಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಸಚಿವ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಯಲ್ಲಿ ಒಪ್ಪಿಕೊಂಡರು.

ಯಾವುದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ರೂಪಿಸಿಲ್ಲವಾದ್ದರಿಂದ ಭಾರತ ತನ್ನ ಗಡಿಗಳನ್ನು ಬಲಪಡಿಸಿಕೊಳ್ಳುವುದರ ಹೊರತು ಹೆಚ್ಚೇನನ್ನೂ ಮಾಡಲು ಸಾಧ್ಯವಿಲ್ಲ ಎಂದರು ಅವರು.

ಗಡಿ ರಕ್ಷಣೆಯನ್ನು ಬಲಪಡಿಸಲು ಅಗತ್ಯವಾದ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ ಎಂದು ಶ್ರೀ ಜಗಜೀವನರಾಂ ಸಭೆಗೆ ಆಶ್ವಾಸನೆ ಇತ್ತರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.