75 ವರ್ಷಗಳ ಹಿಂದೆ
ಹುಬ್ಬಳ್ಳಿ, ಸೆ. 6– ಕೆ.ಪಿ.ಸಿ.ಸಿ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರು ತಮ್ಮ ಕಾರ್ಯಕಾರಿ ಮಂಡಳಿಯ ಸದಸ್ಯರ ಹೆಸರುಗಳನ್ನು ಘೋಷಿಸಿದರು. ಮಂಡಳಿಯು ಇಬ್ಬರು ಉಪಾಧ್ಯಕ್ಷರು ಮತ್ತು ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡಿದೆ.
‘ನವಯುಗ’ ಪತ್ರಿಕೆಯ ಸಂಪಾದಕ ಟಿ.ಟಿ.ನೆಸ್ವಿ ಮತ್ತು ಮಂಗಳೂರಿನ ಸಂಸದ ಯು.ಶ್ರೀನಿವಾಸ್ ಮಲ್ಯ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟಿ.ಟಿ.ನೆಸ್ವಿ ಅವರು ಮಂಡಳಿಯ ಖಜಾಂಚಿ ಸಹ ಆಗಿದ್ದಾರೆ. ಜಿ.ವಿ.ಹಳ್ಳಿಕೇರಿ ಮತ್ತು ವಿ.ಟಿ ಮಾಗಡಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಉಳಿದಂತೆ ಮಂಡಳಿಯಲ್ಲಿ 10 ಮಂದಿ ಸದಸ್ಯರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.