ADVERTISEMENT

25 ವರ್ಷಗಳ ಹಿಂದೆ | ಕೃಷ್ಣಾ: ರಾಜ್ಯದ ಪಾಲು ಬಳಕೆಗೆ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:15 IST
Last Updated 15 ಅಕ್ಟೋಬರ್ 2025, 4:15 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕಲ್ಬುರ್ಗಿ, ಅ. 14– ಬಚಾವತ್‌ ತೀರ್ಪಿನ ‘ಬಿ’ ಯೋಜನೆಯಂತೆ ರಾಜ್ಯಕ್ಕೆ ದೊರೆಯುವ ಕೃಷ್ಣಾ ನೀರಿನ ಪಾಲನ್ನು ಬಳಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲಿಯೇ ವಿರೋಧ ಪಕ್ಷಗಳ ಜೊತೆ ಚರ್ಚಿಸಿ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಇಂದು ತಿಳಿಸಿದರು.

ಅವರು ಇಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಉದ್ಘಾಟಿಸಿ ಮಾತನಾಡಿದರು.

ಸದ್ಯದಲ್ಲಿಯೇ ಸೇರಲಿರುವ ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮತ್ತು ತಜ್ಞರೊಂದಿಗೆ ಈ ಬಗ್ಗೆ ಚರ್ಚಿಸಿ ಸರ್ವಸಮ್ಮತ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದರು.

ADVERTISEMENT

‘ಗ್ರೀಟಿಂಗ್ಸ್‌ ಪೋಸ್ಟ್‌’ ಯೋಜನೆ ಆರಂಭ

ಮಂಗಳೂರು, ಅ. 14– ಗ್ರಾಹಕರಿಗೆ ಗ್ರೀಟಿಂಗ್ಸ್‌ ಕಾರ್ಡ್‌ ಒದಗಿಸುವ ‘ಗ್ರೀಟಿಂಗ್ಸ್‌ ಪೋಸ್ಟ್‌’ ಯೋಜನೆಯನ್ನು ಮಂಗಳೂರು ಅಂಚೆ ಇಲಾಖೆ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.