ADVERTISEMENT

75 ವರ್ಷಗಳ ಹಿಂದೆ: ರಾಷ್ಟ್ರಪಿತನಿಗೆ ರಾಷ್ಟ್ರಾಧ್ಯಕ್ಷರ ಕಣ್ಣೀರು ಕಾಣಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:16 IST
Last Updated 15 ಅಕ್ಟೋಬರ್ 2025, 4:16 IST
   

ಅಹ್ಮದಾಬಾದ್‌, ಅ. 14– ಗಾಂಧೀಜಿ ವಾಸಿಸುತ್ತಿದ್ದ ಸಾಬರಮತಿ ಆಶ್ರಮದಲ್ಲಿನ ಕೋಣೆಗೆ ಭೇಟಿ ಇತ್ತಾಗ ರಾಷ್ಟ್ರಾಧ್ಯಕ್ಷರು ಕಂಬಿನಿದುಂಬಿ ಕೆಲವೊತ್ತು ಅತ್ತರು. ರಾಜೇಂದ್ರ ಪ್ರಸಾದರು ಮೊದಲು ಗಾಂಧೀಜಿ ವಾಸಿಸುತ್ತಿದ್ದ, ಕುಳಿತುಕೊಳ್ಳುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಕೊಠಡಿಗೆ ಭೇಟಿ ಇತ್ತರು. ಗಾಂಧೀಜಿ ಜೊತೆ ಇದ್ದ ಪಂಡಿತಧಾರೆಯ ಪುತ್ರಿ ಮಾಧುರಿ ಪ್ರಾರ್ಥನೆಯನ್ನು ಆರಂಭಿಸಿದಾಗ, ರಾಜೇಂದ್ರ ಪ್ರಸಾದರಿಗೆ ತಡೆಯದಾಯಿತು. 15 ನಿಮಿಷ ಅವರ ಮನಸ್ಸು ನೆಮ್ಮದಿಗೆ ಬರಲಿಲ್ಲ. ಕಣ್ಣೀರು ಕೋಡಿ ಅವರ ಕೆನ್ನೆಯ ಮೇಲೆ ಹರಿಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.