ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಆಗಸ್ಟ್‌ 29, 1995

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:08 IST
Last Updated 28 ಆಗಸ್ಟ್ 2020, 15:08 IST
   

ತಮಿಳ್ನಾಡಿಗೆ ನೀರು ಬಿಡುಗಡೆ ವಿರುದ್ಧ ಚಳವಳಿ ಬೆದರಿಕೆ

ಬೆಂಗಳೂರು, ಆ. 28– ರಾಜ್ಯ ಸರ್ಕಾರ ತಮಿಳುನಾಡಿಗೆ 10 ಟಿಎಂಸಿಯಷ್ಟು ನೀರು ಹರಿಸಲು ನಿರ್ಧಾರ ಕೈಗೊಂಡು ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಸರ್ವ ಪಕ್ಷಗಳ ಮುಖಂಡರು ಇಂದು ಇಲ್ಲಿ ತೀವ್ರವಾಗಿ ಖಂಡಿಸಿ ಈ ‘ಏಕಪಕ್ಷೀಯ ನಿರ್ಧಾರ’ದ ವಿರುದ್ಧ ತೀವ್ರ ಚಳವಳಿ ಹೂಡುವ ಎಚ್ಚರಿಕೆ ನೀಡಿದ್ದಾರೆ.

ಆದರೆ, ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ‘ಕಾವೇರಿ ಜಲವಿವಾದ ಸೂಕ್ಷ್ಮ ವಿಚಾರ. ಇದಕ್ಕೆ ಪರಿಹಾರ ಕಂಡುಕೊಳ್ಳುವಾಗ ರಾಜಕೀಯ ಬೆರೆಸುವುದು ಸರಿಯಲ್ಲ. ಕಾವೇರಿ ಜಲವಿವಾದ ನ್ಯಾಯಮಂಡಲಿಯ ಅಂತಿಮ ತೀರ್ಪು ಇನ್ನೂ ಆಗದೇ ಇರುವುದರಿಂದ ಸಂಘರ್ಷಕ್ಕೆ ಇಳಿಯುವುದು ಸೂಕ್ತ ಅಲ್ಲ’ ಎಂದು ರಾಜಕೀಯ ಮುಖಂಡರು ಮತ್ತು ರೈತರಲ್ಲಿ ಮನವಿ ಮಾಡಿದರು.

ADVERTISEMENT

‘ಹೈದರಾಬಾದ್‌ ಚಲೊ’: ಎನ್‌.ಟಿ.ಆರ್‌ ಕರೆ

ಹೈದರಾಬಾದ್‌, ಆ. 28 (ಪಿಟಿಐ, ಯುಎನ್‌ಐ)– ತಮ್ಮ ಪಕ್ಷದ ಶಾಸಕರ ಬಂಡಾಯದ ವಿರುದ್ಧ ಜನರನ್ನು ಸಂಘಟಿಸಲು ರಾಜ್ಯ ಪ್ರವಾಸ ಹೊರಟಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌ ಅವರು ವಿಧಾನಸಭೆಯಲ್ಲಿ ತಮಗೂ ತಮ್ಮ ಅಳಿಯ ಚಂದ್ರಬಾಬು ನಾಯ್ಡು ಅವರ ಬಣಕ್ಕೂ ಬಲಾಬಲ ಪರೀಕ್ಷೆ ನಡೆಯಲಿರುವ ಆಗಸ್ಟ್‌ 31ರಂದು ಹೈದರಾಬಾದಿಗೆ ಭಾರಿ ಸಂಖ್ಯೆಯಲ್ಲಿ ಬರುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದರು.

ಇತ್ತ ರಾಜಧಾನಿಯಲ್ಲಿ ಅಧಿಕಾರವನ್ನು ಎನ್‌ಟಿಆರ್‌ ಅವರ ಕೈನಿಂದ ಕಸಿಯುವುದು ಹೇಗೆ ಎಂಬ ವಿಷಯದಲ್ಲಿ ನಾಯ್ಡು ಬಣದವರು ಮಂತ್ರಾಲೋಚನೆಯಲ್ಲಿ ಇಡೀದಿನನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.