75 ವರ್ಷಗಳ ಹಿಂದೆ
ಮುಂಬಯಿ, ಆಗಸ್ಟ್ 31– ಇಲ್ಲಿನ ಉತ್ತರ ವಲಯದ ಕೈಗಾರಿಕಾ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಬಟ್ಟೆ ಗಿರಣಿ ಕಾರ್ಮಿಕರ ಹೋರಾಟವು, ಇಂದು ಹಿಂಸಾರೂಪ ತಳೆದಿದೆ.
ಹಿಂದೂ ಮಜ್ದೂರ್ ಸಭಾ ನೇತೃತ್ವದಡಿ ನಡೆಯುತ್ತಿರುವ ಈ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ವಿಮಾನ ಪತನ: 55 ಸಾವು
ಕೈರೊ, ಆಗಸ್ಟ್ 31– ಫ್ರಾಂಕ್‌ಫರ್ಟ್‌ನಿಂದ ಕೈರೊಕ್ಕೆ ಬರುತ್ತಿದ್ದ ‘ಸ್ಟಾರ್ ಆಫ್ ಮೇರಿಲ್ಯಾಂಡ್’ ವಿಮಾನವು ಇಂದು ಬೆಳಿಗ್ಗೆ ಪತನಗೊಂಡಿದ್ದು, ವಿಮಾನದಲ್ಲಿದ್ದ 55 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇವರಲ್ಲಿ 8 ಮಂದಿ ಭಾರತೀಯರು ಸೇರಿದ್ದಾರೆ ಎಂದು ಟ್ರಾನ್‌ವರ್ಲ್ಡ್ ಏರ್‌ಲೈನ್ಸ್ ತಿಳಿಸಿದೆ.
ಮೃತಪಟ್ಟವರಲ್ಲಿ ಅಮೆರಿಕದ ಐವರು ಪ್ರಜೆಗಳು ಇದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.