ಹೈದರಾಬಾದ್, ಅ. 6– ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ವೈಷಮ್ಯ ತೊರೆದು, ಆಡಳಿತದ ಹೊಣೆಗಾರಿಕೆ ಯನ್ನು ಹೊರಲು ಮುಂದೆ ಬರ ಬೇಕೆಂದು ಭಾರತದ ಉಪ ಪ್ರಧಾನಿ ಸರದಾರ್ ಪಟೇಲರು ಹೈದರಾಬಾದ್ ಸಂಸ್ಥಾನ ಕಾರ್ಯಕರ್ತರುಗಳನ್ನು ದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ಕಾಂಗ್ರೆಸ್ ಸಂಸ್ಥೆಯ ಅನೈಕ್ಯತೆಯು ಸಂಸ್ಥಾನದ ಪ್ರಕ್ಷುಬ್ಧ ಪ್ರದೇಶದ ಅವ್ಯವಸ್ಥೆ ತಡೆಗಟ್ಟಲು ಪ್ರತಿಬಂಧಕ ವಾಗಿದೆಯೆಂದೂ ಅವರು ಹೇಳಿದರು.
ಬೆಂಗಳೂರು, ಅ. 6: ಭಾರತ ಸರಕಾರದ ಅನುಮತಿಯೊಡನೆ ಮೈಸೂರು ಸರಕಾರ, ಸಂಸ್ಥಾನಕ್ಕೆ ಪ್ರತ್ಯೇಕವಾದ ಧ್ವಜ ಸಂಕೇತವನ್ನು ಇಟ್ಟುಕೊಳ್ಳಲು ನಿರ್ಧರಿಸಿದೆ. ನೂತನ ಸಂಕೇತ ಯುದ್ಧ ಕವಚ ಹಾಗೂ ಅಶೋಕಸ್ತಂಭ ಒಳಗೊಂಡಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.