ADVERTISEMENT

25 ವರ್ಷಗಳ ಹಿಂದೆ: ಷರೀಫ್‌ಗೆ 14 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 22:30 IST
Last Updated 22 ಜುಲೈ 2025, 22:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಇಸ್ಲಾಮಾಬಾದ್‌, ಜುಲೈ 22– ತೆರಿಗೆ ವಂಚನೆ ಆರೋಪಕ್ಕಾಗಿ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು, ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಲ್ಲದೆ, 21 ವರ್ಷಗಳವರೆಗೆ ರಾಜಕೀಯ ನಿಷೇಧವನ್ನೂ ಹೇರಿದೆ.

ಅಪಹರಣ ಮತ್ತು ಭಯೋತ್ಪಾದನೆ ಕುರಿತಂತೆ ಈಗಾಗಲೇ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಷರೀಫ್‌ಗೆ ನ್ಯಾಯಾಧೀಶ ಫಾರೂಕ್‌ ಲತೀಫ್‌ ಅವರು, ಎರಡು ಕೋಟಿ ರೂಪಾಯಿ (37,000 ಡಾಲರ್) ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಇನ್ನೂ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ADVERTISEMENT

ಕೇಂದ್ರಕ್ಕೆ ಮಹಾರಾಷ್ಟ್ರ ಸಡ್ಡು ಬಾಳಾ ಠಾಕ್ರೆ ಬಂಧನಕ್ಕೆ ಸಿದ್ಧತೆ

ಮುಂಬೈ, ಜುಲೈ 22 (ಪಿಟಿಐ)– ಅರೆ ಸೈನಿಕ ಪಡೆ ಕಳಿಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಡ್ಡು ಹೊಡೆದಿರುವ ಮಹಾರಾಷ್ಟ್ರ ಸರ್ಕಾರವು, ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್‌ ಠಾಕ್ರೆ ಅವರ ಬಂಧನದಿಂದ ಉಂಟಾಗಬಹುದಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಎದುರಿಸಲು ನೆರೆಯ ರಾಜ್ಯಗಳಿಂದ ಭದ್ರತಾ ಪಡೆಗಳನ್ನು ಕರೆಸಿಕೊಳ್ಳಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.