ADVERTISEMENT

ಶುಕ್ರವಾರ, 10–10–1969

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 19:31 IST
Last Updated 9 ಅಕ್ಟೋಬರ್ 2019, 19:31 IST

ಕಾಂಗ್ರೆಸ್: ಹೊಸ ಬಿಕ್ಕಟ್ಟು

ನವದೆಹಲಿ, ಅ. 9– ಕಾರ್ಯಕಾರಿ ಸಮಿತಿ ಏಕತಾ ನಿರ್ಣಯವನ್ನು ಅಂಗೀಕರಿಸಿದ ನಂತರ ಕೇವಲ ಆರು ವಾರಗಳಲ್ಲೇ ಕಾಂಗ್ರೆಸ್ ಪಕ್ಷ ಹೊಸ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಇತರ ಐದು ಮಂದಿ ನಾಯಕರು ಇಂದು ಕಾಂಗ್ರೆಸ್‌ ಅಧ್ಯಕ್ಷ
ಎಸ್. ನಿಜಲಿಂಗಪ್ಪನವರಿಗೆ ಪತ್ರವೊಂದನ್ನು ಬರೆದು ಅವರ ವಿರುದ್ಧ ‘ಸ್ವೇಚ್ಛಾವರ್ತನೆ’ಯ ಆಪಾದನೆ ಮಾಡಿದ್ದಾರೆ.

ADVERTISEMENT

ನಿಜಲಿಂಗಪ್ಪನವರು ಸಿ. ಸುಬ್ರಹ್ಮಣ್ಯಂ ಅವರನ್ನು ಕಾರ್ಯಸಮಿತಿಯಿಂದ ಹಾಗೂ ಉತ್ತರ ಪ್ರದೇಶದ ಕಮಲಾಪತಿ ತ್ರಿಪಾಠಿ, ಆಂಧ್ರದ ಕಾಕಿನಿ ವೆಂಕಟರತ್ನಂ ಅವರು ಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಗಳಿಂದ ಏಕಪಕ್ಷೀಯ ವಾಗಿ ಪದಚ್ಯುತ ಗೊಳಿಸಿದ್ದಾರೆಂದು ಆಪಾದಿಸಿದ್ದಾರೆ.

ಆರೋಪಕ್ಕೆ ಎಸ್ಸೆನ್ ನಕಾರ

ನವದೆಹಲಿ, ಅ. 9– ಅಕ್ಟೋಬರ್ 30ಕ್ಕಿಂತ ಮುಂಚೆ ಕಾರ್ಯಸಮಿತಿ ಸಭೆ ಕರೆಯಲು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ನಿರಾಕರಿಸಿ, ಎ.ಐ.ಸಿ.ಸಿ. ತುರ್ತು ಪರಿಶೀಲನೆ ಅಗತ್ಯವಾಗುವಂಥ ಹೊಸ ಘಟನೆಗಳೇನು ಸಂಭವಿಸಿವೆ ಯೆಂಬುದು ತಮಗೆ ಸ್ಪಷ್ಟವಾಗಿಲ್ಲವೆಂದು ತಿಳಿಸಿದರು.

ಪ್ರಧಾನಮಂತ್ರಿಯೂ ಸೇರಿ ಆರು ಜನ ಕಾಂಗ್ರೆಸ್ ಕಾರ್ಯ ಸಮಿತಿ ಸದಸ್ಯರು ಇಂದು ಬೆಳಿಗ್ಗೆ ಕಳುಹಿಸಿದ್ದ ಪತ್ರಕ್ಕೆ ನಿಜಲಿಂಗಪ್ಪ ನವರು ಉತ್ತರವಿತ್ತು, ತಮ್ಮ ವಿರುದ್ಧ ಮಾಡಲಾಗಿರುವ ಸ್ವೇಚ್ಛಾ ವರ್ತನೆಯ ಆಪಾದನೆ ಸರಿಯಲ್ಲವೆಂದು ವಿವರಿಸುವ ಪತ್ರವನ್ನು ಪ್ರಧಾನಿ ನಿವಾಸಕ್ಕೆ ತಲುಪಿಸಿದರು.

ಎಲ್.ಐ.ಸಿ. ಪ್ರೀಮಿಯಂ ದರಗಳಲ್ಲಿ ರಿಯಾಯಿತಿ ಅಸಂಭವ

ನವದೆಹಲಿ, ಅ. 9– ಸದ್ಯದ ವೆಚ್ಚದ ಮಟ್ಟದಲ್ಲಿ ಪ್ರೀಮಿಯಂ ದರಗಳನ್ನು ಇಳಿಸಲು ಸಾಧ್ಯವಾಗದೆಂಬ ಜೀವವಿಮಾ ಕಾರ್ಪೊರೇಷನ್ ಅಭಿಪ್ರಾಯವನ್ನು ಸರ್ಕಾರ ಒಪ್ಪುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.