ADVERTISEMENT

ಶನಿವಾರ, 30–7–1994

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
   

‘ವಿ.ವಿಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಸಲ್ಲ’

ಮೈಸೂರು, ಜುಲೈ 29– ವಿಶ್ವವಿದ್ಯಾನಿಲಯಗಳನ್ನು ರಾಜಕಾರಣಿಗಳು ತಮ್ಮ ಸ್ವಾರ್ಥ ರಾಜಕೀಯ ಗುರಿ ಸಾಧನೆಗಾಗಿ ಆಡುಂಬೊಲಗಳಾಗಿ ಪರಿವರ್ತಿಸಬಾರದು ಎಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಮನವಿ ಮಾಡಿದ್ದಾರೆ.

ಮೈಸೂರು ವಿ.ವಿ ಆಶ್ರಯದಲ್ಲಿ ವ್ಯವಸ್ಥೆ ಮಾಡಿರುವ ದಕ್ಷಿಣ ವಲಯ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಮ್ಮೇಳನವನ್ನು ಇಂದು ಇಲ್ಲಿ ಉದ್ಘಾಟಿಸಿದ ಅವರು ‘ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಮುಂದುವರಿದರೆ ಮುಂದಿನ ಜನಾಂಗ ನಿಮ್ಮನ್ನು ಎಂದೂ ಕ್ಷಮಿಸುವುದಿಲ್ಲ, ಇದನ್ನು ನೆನಪಿಡಿ’ ಎಂದುರಾಜಕಾರಣಿಗಳನ್ನು ಎಚ್ಚರಿಸಿದರು.

ADVERTISEMENT

ನರ್ಸರಿ ಶಿಕ್ಷಣ: ಪ್ರವೇಶ ಪರೀಕ್ಷೆ ರದ್ದುಗೊಳಿಸಲು ಸಲಹೆ

ನವದೆಹಲಿ, ಜುಲೈ 29 (ಯುಎನ್‌ಐ)– ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಜತೆಗೆ ಮಕ್ಕಳಿಗೆ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯಶ್‌ಪಾಲ್ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.

ನರ್ಸರಿ ಶಾಲಾ ಮಟ್ಟದಲ್ಲಿ ಕೆಲವು ನಿಯಮಗಳನ್ನು ಪಾಲಿಸುವಂತೆ ಹಾಗೂ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಗಳನ್ನು ರದ್ದುಗೊಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಿಕ್ಷಣ ಇಲಾಖೆಯು ರಾಜ್ಯಗಳಿಗೆ ಸಲಹೆ ಮಾಡಿದೆ. ಇದಕ್ಕಾಗಿ ಶಾಲಾ ಶಿಕ್ಷಣ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆಯೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.