ADVERTISEMENT

ಶನಿವಾರ, 25–6–1994

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:45 IST
Last Updated 24 ಜೂನ್ 2019, 19:45 IST

ತೆಲಂಗಾಣವೂ ಇಲ್ಲ; ರಾಷ್ಟ್ರಪತಿ ಆಡಳಿತಕ್ಕೂ ನಕಾರ

ಬೆಂಗಳೂರು, ಜೂನ್ 24– ಪ್ರತ್ಯೇಕ ತೆಲಂಗಾಣ ರಚನೆ ಮತ್ತು ಅದಕ್ಕೆ ಮುನ್ನ ರಾಷ್ಟ್ರಪತಿ ಆಡಳಿತ ಜಾರಿಗೆ ತರುವುದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಪ್ಪಿಕೊಳ್ಳದು.

ಚಳವಳಿಕಾರರ ಈ ಬೇಡಿಕೆಗಳನ್ನು ‘ಒಪ್ಪಿಕೊಳ್ಳಲು ನಮಗೆ ಕಷ್ಟವಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜ
ಲಿಂಗಪ್ಪನವರು ಇಂದು ಇಲ್ಲಿ ಸ್ಪಷ್ಟವಾಗಿ ಘೋಷಿಸಿದರು. ಕಾರ್ಯಕಾರಿ ಸಮಿತಿ ಪರವಾಗಿ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ದೆಹಲಿಯಲ್ಲಿ ತೆಲಂಗಾಣ ನಾಯಕರೊಡನೆ ನಡೆಸಿದ ಮಾತುಕತೆ ಮುರಿದು ಬಿದ್ದುದಕ್ಕೆ ಕಾಂಗ್ರೆಸ್ ಅಧ್ಯಕ್ಷರು ವಿಷಾದವನ್ನು ವ್ಯಕ್ತಪಡಿಸಿ, ‘ಚಳವಳಿಕಾರರ ಮೂಲಬೇಡಿಕೆಗಳು ಈಡೇರುವ ಕಾರಣ, ಅವರು ಚಳವಳಿಯನ್ನು ಮುಂದುವರಿಸಬಾರದೆಂದು ಮನವಿ ಮಾಡಿದರು.

ADVERTISEMENT

ಜಪಾನೀಯರಿಂದ ಹೆಚ್ಚು ಕಲಿಯಲು ಭಾರತೀಯರಿಗೆ ಪ್ರಧಾನಿ ಹಿತವಚನ

ಟೋಕಿಯೋ, ಜೂನ್ 24– ಜಪಾನೀಯರಿಂದ ಆದಷ್ಟು ಹೆಚ್ಚು ಹೊಸ ಸಂಗತಿಗಳನ್ನು ಕಲಿತುಕೊಳ್ಳಿ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಜಪಾನಿನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಇಂದು ಹಿತವಚನವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.