ADVERTISEMENT

ಸೋಮವಾರ, 6–12–1993

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:15 IST
Last Updated 5 ಡಿಸೆಂಬರ್ 2018, 20:15 IST

ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ: ಬಿಹಾರ ಸಜ್ಜು

ಪಟ್ನಾ, ಡಿ. 5– ಬಿಗಿ ಭದ್ರತಾ ಕ್ರಮಗಳು ಹಾಗೂ ವಿವಿಧ ಧಾರ್ಮಿಕ ಸಂಘಟನೆಗಳ ಉಗ್ರ ಟೀಕೆಗಳ ನಡುವೆ, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸದಸ್ಯರನ್ನು ನಾಳೆ ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಮತಾಂತರಿಸುವ ಕಾರ್ಯಕ್ಕೆ ಬಿಹಾರ ಇದೀಗ ಸಜ್ಜಾಗಿದೆ.

ಬಂಗಾರಪ್ಪ ಅವರಿಂದ ಶಿಸ್ತು ಉಲ್ಲಂಘನೆ

ADVERTISEMENT

ನವದೆಹಲಿ, ಡಿ. 5– ಕಾಂಗೈ ಅಧ್ಯಕ್ಷ, ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ನಾಯಕತ್ವ ವಿಚಾರವಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಅಸಮ್ಮತಿಸಿದರು.

ಪ್ರಧಾನಿ ರಾವ್ ನಾಯಕತ್ವವನ್ನು ಬಂಗಾರಪ್ಪ ಅವರು ಟೀಕಿಸಿರುವುದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಒಂದು ರಾಜಕೀಯ ಪಕ್ಷವಾಗಿ ಈಗಷ್ಟೆ ಮುಗಿದ ಚುನಾವಣೆಯಲ್ಲಿ ನಾವು ಪಡೆದ ಅನುಕೂಲಕರ ಸ್ಥಿತಿಯನ್ನು ಇಂಥ ಟೀಕೆಗಳು ತಿರುವು ಮುರುವು ಮಾಡುತ್ತವೆ. ಇದು ಬಿಜೆಪಿಗೆ ಸಹಾಯವಾಗುತ್ತದಷ್ಟೆ ಎಂದು ಕೃಷ್ಣ ಹೇಳಿದರು. ರಾವ್ ಬಗ್ಗೆ ಬಂಗಾರಪ್ಪ ಅವರು ಮಾಡಿದ ಟೀಕೆ ಇಂದು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.