ADVERTISEMENT

ಪ್ರಜಾವಾಣಿ 25 ವರ್ಷದ ಹಿಂದೆ| ಶುಕ್ರವಾರ, 20-03-1998

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:30 IST
Last Updated 19 ಮಾರ್ಚ್ 2023, 19:30 IST
   

43 ಸಚಿವರ ವಾಜಪೇಯಿ ಸಂಪುಟ ಅಸ್ತಿತ್ವಕ್ಕೆ

ನವದೆಹಲಿ, ಮಾರ್ಚ್‌ 19– ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ 43 ಮಂದಿ ಮಂತ್ರಿ ಮಂಡಲದ ಪ್ರಧಾನಮಂತ್ರಿಯಾಗಿ ಇಂದು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್ ಸಂಪುಟ ದರ್ಜೆ ಸಚಿವರಾಗಿ ಮತ್ತು ಬೆಳಗಾವಿ ಕ್ಷೇತ್ರದಿಂದ ಮೊದಲ ಬಾರಿಗೆ ಆರಿಸಿ ಬಂದ ರೈತ ನಾಯಕ ಬಾಬಾ ಗೌಡ ಪಾಟೀಲ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ADVERTISEMENT

ಸಿಪಿಎಂ ನೇತಾರ ಇಎಂಎಸ್ ಇನ್ನಿಲ್ಲ

ತಿರುವನಂತಪುರ, ಮಾರ್ಚ್ 19– ಏಷ್ಯಾಖಂಡದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮೊದಲ ಕಮ್ಯುನಿಸ್ಟ್‌ ಸರ್ಕಾರದ ನೇತೃತ್ವ ವಹಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಮ್ಯುನಿಸ್ಟ್‌ ನಾಯಕ ಇ.ಎಂ.ಎಸ್‌. ನಂಬೂದಿರಿ ಪಾಡ್‌ (89) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಇಎಂಎಸ್‌ ಎಂದೇ ಖ್ಯಾತರಾಗಿದ್ದ ಅವರನ್ನು ಉಸಿರಾಟದ ತೊಂದರೆಯಿಂದ ಇಂದು ಮಧ್ಯಾಹ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.