ADVERTISEMENT

25 ವರ್ಷಗಳ ಹಿಂದೆ| ಸೋಮವಾರ, 12.2.1996

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 15:31 IST
Last Updated 11 ಫೆಬ್ರುವರಿ 2021, 15:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಲ್ಕತ್ತದಲ್ಲಿ ಕಣ್ಮನ ಸೆಳೆದ ವಿಶ್ವಕಪ್‌ ಕ್ರಿಕೆಟ್‌ ಉದ್ಘಾಟನೆ

ಬೆಂಗಳೂರು, ಫೆ. 11– ವಿಶ್ವವಿಖ್ಯಾತ ಈಡನ್‌ ಗಾರ್ಡನ್ಸ್‌ನಲ್ಲಿ ವರ್ಣರಂಜಿತ ಸಮಾರಂಭದ ಮಧ್ಯೆ ವಿಲ್ಸ್‌ ವಿಶ್ವಕಪ್‌–1996 ಇಂದು ಉದ್ಘಾಟನೆಗೊಂಡಿತು.

ಆಸ್ಟ್ರೇಲಿಯಾದ ನಾಯಕ ಮಾರ್ಕ್‌ ಟೇಲರ್‌ ನೇತೃತ್ವದಲ್ಲಿ ಸಂಜೆ ಸರಿಯಾಗಿ ಆರು ಗಂಟೆಗೆ 12 ದೇಶಗಳ ಕ್ರಿಕೆಟ್‌ ತಂಡದ ಆಟಗಾರರು ಕ್ರೀಡಾಂಗಣವನ್ನು ಪ್ರವೇಶಿಸುವುದರೊಂದಿಗೆ ಸಮಾರಂಭ ಆರಂಭವಾಯಿತು. ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿದ್ದ 12 ಮಂದಿ ವಿಶ್ವವಿಖ್ಯಾತ ಮಾಡೆಲ್‌ಗಳು 12 ತಂಡಗಳ ನೇತೃತ್ವ ವಹಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಟೂರ್ನಿಯ ಉದ್ಘಾಟನೆಯನ್ನು ಘೋಷಿಸಿದರೆ, ಮಾಜಿ ವಿಶ್ವ ಸುಂದರಿ ಸುಸ್ಮಿತಾ ಸೇನ್‌ ಅವರು 12 ತಂಡಗಳ ನಾಯಕರಿಗೆ ರಾಷ್ಟ್ರಧ್ವಜ ನೀಡಿದರು.

ADVERTISEMENT

ಮಕ್ಕಳ ಸ್ಕೂಲ್‌ ಬ್ಯಾಗ್‌ ಶೀಘ್ರ ಹಗುರಾಗಲಿದೆ

ನವದೆಹಲಿ, ಫೆ. 11 (ಯುಎನ್ಐ)– ಪುಟ್ಟ ಮಕ್ಕಳ ಸ್ಕೂಲ್ ಬ್ಯಾಗ್‌ ಇನ್ನು ಮುಂದಾದರೂ ಹಗುರವಾಗಬಹುದು. ಮಕ್ಕಳ ಮೇಲಿನ ಶೈಕ್ಷಣಿಕ ಹೊರೆ ಇಳಿಸಲು ನೇಮಿಸಲಾದ ಯಶ್‌ಪಾಲ್‌ ಸಮಿತಿ ನೀಡಿದ ವರದಿಯ ಅನುಷ್ಠಾನವನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 12 ಸದಸ್ಯರ ಸಮಿತಿಯೊಂದನ್ನು ನೇಮಿಸಿದೆ.

‘ಎಳೆಯ ಮಕ್ಕಳ ಮೇಲೆ ಕಠಿಣ ಕ್ರಮಗಳ ಮೂಲಕ ಶಿಕ್ಷಣ ಪದ್ಧತಿಯನ್ನು ಹೇರಲಾಗಿದೆ. ಕಲಿಕೆಯಲ್ಲಿನ ಆನಂದವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಬ್ಬರೂ ಕಳೆದುಕೊಂಡಿದ್ದಾರೆ’ ಎಂದು ಯಶ್‌ಪಾಲ್‌ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.