ADVERTISEMENT

ಸೋಮವಾರ, 26–5–1969

​ಪ್ರಜಾವಾಣಿ ವಾರ್ತೆ
Published 25 ಮೇ 2019, 16:06 IST
Last Updated 25 ಮೇ 2019, 16:06 IST

ಇಲ್ಲದಾಗ ಕೊರಗದ, ಬಂದಾಗ ಹಿಗ್ಗದ ‘ಅಣ್ಣ’ ಮಾಸ್ತಿಯವರಿಗೆ ಅಕ್ಯಾಡಮಿ ಪ್ರಶಸ್ತಿ ನೀಡಿಕೆ

ಬೆಂಗಳೂರು, ಮೇ 25– ‘ಪ್ರಶಸ್ತಿ ಬಂದಿಲ್ಲ ಅಂತ ನಾನು ಕೊರಗಲಿಲ್ಲ. ಈಗ ಪ್ರಶಸ್ತಿ ಬಂದಿದೆ, ತಮಗೆಲ್ಲ ಸಂತೋಷವಾಗಿದೆ. ನನಗೂ ಸಂತೋಷ’

ಕಿರಿಯ ಅಭಿಮಾನಿಗಳು ಮತ್ತು ಮಿತ್ರರು ಒಂದು ಗಂಟೆ ಕಾಲ ತಮ್ಮ ಬಗ್ಗೆ ನುಡಿದ ಅಭಿಮಾನದ ಮತ್ತು ಅಭಿನಂದನೆಯ ಮಾತುಗಳಿಗೆ ‘ಕನ್ನಡದ ಹಿರಿಯಣ್ಣ’ ನೀಡಿದ ಉತ್ತರದಲ್ಲಿ ಅವರ ಸಮಭಾವ ವ್ಯಕ್ತವಾಗಿತ್ತು.

ADVERTISEMENT

ಕನ್ನಡ ಸಾಹಿತ್ಯ ಪರಿಷನ್ಮಂದಿರದಲ್ಲಿ ಇಂದು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಸಮರ್ಪಿಸಲು ಏರ್ಪಡಿಸಿದ್ದ ಸಮಾರಂಭ ಒಂದು ಅಖಿಲ ಭಾರತದ ರೂಪದಂತಿತ್ತು.

‌ಸೂಡಾನಿನಲ್ಲಿ ಸೇನಾ ಕ್ರಾಂತಿ: ವಾಮವಾದೀ ಗುಂಪು ಆಡಳಿತಕ್ಕೆ

ಕೈರೋ, ಮೇ 25– ಪ್ರಧಾನ ಮಂತ್ರಿ ಮಹಮದ್ ಮಹಗಬ್ ಅವರ ಸರ್ಕಾರವನ್ನು ಪದಚ್ಯುತಗೊಳಿಸಿ ವಾಮವಾದಿಗಳಾದ ಸೇನಾಧಿಕಾರಿಗಳ ಹಿಡಿತದಲ್ಲಿರುವ ಕ್ರಾಂತಿಕಾತಿ ಮಂಡಳಿಯು ಇಂದು ಸೂಡಾನಿನ ಆಡಳಿತ ಯಂತ್ರವನ್ನು ವಶಪಡಿಸಿಕೊಂಡಿತೆಂದು ಓಂಡಮನ್ ರೇಡಿಯೋ ವರದಿ ಮಾಡಿತು.

ಅಬುಬಾಕರ್ ಆವಾದಲ್ಲಿಅವರ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲಾಗಿದೆ.ಹೊಸ ಸರ್ಕಾರದಲ್ಲಿ ಅವಾದಲ್ಲರೀರವರೇ ವಿದೇಶಾಂಗ ಸಚಿವರಾಗಿರುತ್ತಾರೆ. ಇಂದು ನಡೆದ ಕ್ರಾಂತಿಯೂ ರಕ್ತರಹಿತವೇ ಎಂಬುದು ತಿಳಿದು ಬಂದಿಲ್ಲ. ಸೂಡಾನಿನ
ರಾಜಧಾನಿ ಖಾರ್ಟೂಂನಲ್ಲಿನ ವಿದ್ಯಮಾನಗಳ ಬಗೆಗೆ ವಿವರಗಳು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.