ADVERTISEMENT

ಮಂಗಳವಾರ, 14–01–1969

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ಅತ್ಯಗತ್ಯ ಆದರೆ ಮಾತ್ರ ಹೊಸ ಶಾಲೆ, ಕಾಲೇಜು

ಬೆಂಗಳೂರು, ಜ.13– ನಾಲ್ಕನೆಯ ಯೋಜನೆಯ ಅವಧಿಯಲ್ಲಿ ಅತ್ಯಂತ ಅಗತ್ಯವೆನ್ನಿಸಿದರೆ ಮಾತ್ರ ಹೊಸ ಶಾಲೆಗಳು ಮತ್ತು ಕಾಲೇಜುಗಳ ಸ್ಥಾಪನೆಗೆ ಅನುಮತಿ ದೊರೆಯುವುದು.

‘ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆದ ಶೀಘ್ರ ಪ್ರಗತಿಯಿಂದ ಗುಣಮಟ್ಟ ಇಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳಲ್ಲಿ ಈಗಿರುವ ವ್ಯಾಸಂಗ ವ್ಯವಸ್ಥೆಯಗುಣಮಟ್ಟ ಸುಧಾರಿಸಲು ಗಮನ ನೀಡಲಾಗುವುದು’ ಎಂದು ರಾಜ್ಯಪಾಲರು ಇಂದು ವಿಧಾನ ಮಂಡಲಕ್ಕೆ ತಿಳಿಸಿದರು.

ADVERTISEMENT

ಭಾರತಕ್ಕೆ ‘ವಿಕರ್ಸ್‌’ ಟ್ಯಾಂಕ್‌ಗಳು

ಲಂಡನ್, ಜ.13– ಸುಮಾರು ಹತ್ತು ಕೋಟಿ ರೂ ಬೆಲೆಯ (50 ಲಕ್ಷ ಬ್ರಿಟಿಷ್ ಪೌಂಡ್) ‘ವಿಕರ್ಸ್’ ಟ್ಯಾಂಕ್‌ಗಳನ್ನು ಭಾರತಕ್ಕೆ ಶೀಘ್ರದಲ್ಲೇ ಸರಬರಾಜು ಮಾಡಲಾಗುತ್ತದೆ.

ಭಾರತದಲ್ಲಿ ವಿಜಯಂತ ಟ್ಯಾಂಕುಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿನ ವಿಕರ್ಸ್ ಸಂಸ್ಥೆ ಸಹಕರಿಸುತ್ತಿದೆ. ಆದರೆ ‘ವಿಕರ್ಸ್’ ಟ್ಯಾಂಕುಗಳ ಸರಬರಾಜು ಕುರಿತು ವರದಿಗಳನ್ನು ಸಂಸ್ಥೆ ನಿರಾಕರಿಸಲೂ ಇಲ್ಲ, ಸ್ಥಿರೀಕರಿಸಲೂ ಇಲ್ಲ.

ಶರಾವತಿ 5ನೇ ಘಟಕ ಮಾರ್ಚ್ತಿಂಗಳಲ್ಲಿ ಕಾರ್ಯಾರಂಭ

ಬೆಂಗಳೂರು, ಜ.13– ಶರಾವತಿ ವಿದ್ಯುತ್ ಯೋಜನೆಯ 5ನೇ ಘಟಕವು 1969ರ ಮಾರ್ಚ್ ತಿಂಗಳಲ್ಲಿ ಕಾರ್ಯ ಆರಂಭಿಸುವುದು. ಇದರೊಂದಿಗೆ ಇಲ್ಲಿನ ವಿದ್ಯುತ್ ಉತ್ಪಾದನೆ 6,23,700 ಕಿಲೋ ವಾಟುಗಳಿಗೆ ಏರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.