ಹೈದರಾಬಾದ್, ಮೇ 25 (ಪಿಟಿಐ)– ಸಂಘ ಪರಿವಾರದ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುವ ಮೂಲಕ ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರು ಇಂದು ಇಲ್ಲಿ ಅಚ್ಚರಿಯನ್ನುಂಟು ಮಾಡಿದರು.
‘ಸ್ವದೇಶಿ’ ಭಾವನೆಯನ್ನು ಬಹುರಾಷ್ಟ್ರೀಯ ಕಂಪನಿಗಳ ವಿರೋಧಿ ಹಾಗೂ ವಿದೇಶಿ ತಂತ್ರಜ್ಞಾನದ ವಿರೋಧಿ ಎಂದು ಅರ್ಥೈಸುವುದನ್ನು ಪ್ರಬಲವಾಗಿ ವಿರೋಧಿಸಿದ ಅವರು, ಸ್ವದೇಶಿ ಎಂಬ ಪದದ ಮೂಲಕ ನಾವು ಹಿಂದಕ್ಕೆ ಹೋಗುವಂತಾಗಬಾರದು ಎಂದರು.
ವಾಜಪೇಯಿ ನೇತೃತ್ವದ ಸರ್ಕಾರದ ಆರ್ಥಿಕ ಧೋರಣೆಯನ್ನು ವಿರೋಧಿಸುವ ಸ್ವದೇಶಿ ಜಾಗರಣ ಮಂಚ್ ಇಲ್ಲಿ ಏರ್ಪಡಿಸಿ ರುವ ‘ಸ್ವದೇಶಿ ಮೇಳ’ವನ್ನು ಉದ್ಘಾಟಿಸಿದ ಅವರು, ‘ವಿದೇಶಿ ವಸ್ತುಗಳನ್ನು ಬಹಿಷ್ಕರಿಸು ವುದೇ ಸ್ವದೇಶಿ ತತ್ವ ಎಂದು ಅರ್ಥ ಮಾಡಿ ಕೊಳ್ಳಲಾಗಿದೆ. ಆದರೆ ಬದಲಾದ ದೇಶೀಯ ಮತ್ತು ಅಂತರರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವದೇಶಿ ಪದದ ವ್ಯಾಖ್ಯೆಯನ್ನು ಬದಲಾಯಿಸಿಕೊಳ್ಳಬೇಕು ಹಾಗೂ ಅದು ಸಕಾರಾತ್ಮಕವಾಗಿರಬೇಕು’ ಎಂದರು.
ಬೆಂಗಳೂರು, ಮೇ 25– ಕಾರವಾರದ ಬಳಿ ಕೈಗಾದಲ್ಲಿ ಮೂರು ಮತ್ತು ನಾಲ್ಕನೇ ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಅಣುಶಕ್ತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವ ಸಲ್ಲಿಸಲಿದೆ.
‘2800 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕಗಳನ್ನು ನಿರ್ಮಿಸಲಾಗುವುದು’ ಎಂದು ಅಣುಶಕ್ತಿ ಆಯೋಗದ ಅಧ್ಯಕ್ಷ ಆರ್. ಚಿದಂಬರಂ ಪತ್ರಕರ್ತರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.