ದುಷ್ಕರ್ಮಿಯ ಗುಂಡೇಟಿನಿಂದ ಬೇತಮಂಗಲ ಶಾಸಕರಿಗೆ ಗಾಯ
ಭುವನಹಳ್ಳಿ (ಬಂಗಾರಪೇಟೆ ತಾಲ್ಲೂಕು), ಆಗಸ್ಟ್ 10– ಬೇತಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ. ವೆಂಕಟೇಶಪ್ಪ ಅವರ ಮೇಲೆ ಅವರ ತೋಟದಲ್ಲೇ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದ್ದಾನೆ.
ಇಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಭುವನಹಳ್ಳಿಯ ತಮ್ಮ ತೋಟದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ವೆಂಕಟೇಶಪ್ಪ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ, ಮಜ್ಹಲ್ ಲೋಡ್ ಬಂದೂಕಿನಿಂದ ಬೇಲಿಯ ಮರೆಯಿಂದ ಗುಂಡು ಹಾರಿಸಿದ್ದರಿಂದ ಗುಂಡು ಎಡತೊಡೆಗೆ ಬಿದ್ದು ತೂರಿ ಬಲ ತೊಡೆಯನ್ನು ಹೊಕ್ಕಿದೆ.
ಶ್ರೀನಗರ, ಆಗಸ್ಟ್ 10 (ಪಿಟಿಐ)– ಕಾಶ್ಮೀರದಲ್ಲಿ ಹಿಜ್‌ಬುಲ್ ಮುಜಾಹಿದ್ದೀನ್ ಕದನ ವಿರಾಮ ವಾಪಸು ಪಡೆದ 48 ಗಂಟೆಯಲ್ಲೇ ಕೊಠಿಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 12 ಮಂದಿ ಸತ್ತಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ಸತ್ತವರಲ್ಲಿ 10 ಮಂದಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಹಿಂದುಸ್ತಾನ್ ಟೈಮ್ಸ್ ಛಾಯಾಗ್ರಾಹಕ ಪ್ರದೀಪ್ ಕುಮಾರ್ ಭಾಟಿಯಾ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.