ಬೆಂಗಳೂರು, ಆಗಸ್ಟ್ 15–ಕೇಂದ್ರ ಸರ್ಕಾರ ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ನೀಡುವ ಆಹಾರ ಧಾನ್ಯದ ಬೆಲೆಯನ್ನು ಹೆಚ್ಚಿಸಿದ್ದರಿಂದ ಬಡ ಕುಟುಂಬಗಳಿಗೆ ಆಗಿರುವ ತೊಂದರೆ ನಿವಾರಿಸಲು 28 ಲಕ್ಷ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರಧಾನ್ಯ ಪೂರೈಸುವ ‘ಹಳದಿ ಪಡಿತರ ಚೀಟಿ’ ವಿತರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಇಂದು ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಜಾರಿಗೊಳಿಸಿತು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, 53ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಧಾನಿಯ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಈ ವಿಷಯ ಪ್ರಕಟಿಸಿದರು.
ಚಿಕ್ಕಮಗಳೂರು, ಆಗಸ್ಟ್ 15– ಕೊಪ್ಪ ಗಡಿಕಲ್ಲು ಬಳಿ ಸೋಮವಾರ ರಾತ್ರಿ ಜೀಪೊಂದು ಕೆರೆಗೆ ಉರುಳಿ ಮೂವರು ಸತ್ತಿದ್ದಾರೆ.
ರವಿಕುಮಾರ್ (48), ಗೀತಾ (25) ಮತ್ತು ಪುಷ್ಪಾ (28) ಎಂಬುವರು ಸತ್ತವರು. ಇತರ ಮೂವರಿಗೆ ಪೆಟ್ಟಾಗಿದೆ. ಜೀಪಲ್ಲಿ ಇದ್ದವರು ಸಾಗರ ಮತ್ತು ಶಿಕಾರಿಪುರದವರು. ಧರ್ಮಸ್ಥಳಕ್ಕೆ ಹೋಗಿ ವಾಪಸ್ಸಾಗುತ್ತಿ ದ್ದಾಗ ಅಪಘಾತ ಸಂಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.