ಬೆಂಗಳೂರು, ಮೇ 26– ಕರ್ನಾಟಕದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್.ಪಾಟೀಲರ ನಡುವಣ ವಿರಸ ಈಗ ಜಗಜ್ಜಾಹಿರವಾದ ಸಂಗತಿಯಾಗಿದೆ. ಆದರೆ ಅವರುಗಳು ನೀಡುವ ಹೇಳಿಕೆಗಳು ತಮ್ಮಿಬ್ಬರ ನಡುವೆ ವೈಮನಸ್ಯವಿದೆ ಎಂಬ ಆಪಾದನೆಯಲ್ಲಿ ಹುರುಳಿಲ್ಲವೆಂದು ಹೇಳುವಂತೆ ತೋರುತ್ತವೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಕಾರ್ಯ ನಿರ್ವಾಹಕ ಸಮಿತಿಯನ್ನು ವಿಸರ್ಜಿಸಿ ತಮಗೆ ಒಗ್ಗುವಂಥ ಅಡ್‌ಹಾಕ್ ಸಮಿತಿಯೊಂದನ್ನು ರಚಿಸುವ ದಿಸೆಯಲ್ಲಿ ಅರಸು ಅವರು ಕಾರ್ಯ ನಿರತರಾಗಿದ್ದಾರೆಂದು
ಕೆ.ಎಚ್.ಪಾಟೀಲರಿಗೆ ಸ್ಪಷ್ಟವಾಗಿ ಮನವರಿಕೆ ಆಗಿರುವಂತೆ ಕಂಡು ಬರುತ್ತದೆ.
ಕೆ.ಎಚ್.ಪಾಟೀಲರು ಬಹಿರಂಗವಾಗಿ ಸಂಪುಟವನ್ನು ಖಂಡಿಸುವುದು ಹಾಗೂ ಪಕ್ಷದಲ್ಲಿನ ಭಿನ್ನಮತೀಯರನ್ನು ದುರುದ್ದೇಶದಿಂದ ಎತ್ತಿ ಕಟ್ಟುವ ಬಗ್ಗೆ ಅರಸು ಅವರಿಗೆ ಕೋಪ ಉಂಟು ಮಾಡಿರುವಂತೆ ತೋರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.