ADVERTISEMENT

50 ವರ್ಷಗಳ ಹಿಂದೆ; ಔಷಧಗಳಲ್ಲಿ ಅಮಿತ ಲಾಭ:ವಿದೇಶಿ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 23:30 IST
Last Updated 27 ಮೇ 2025, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಔಷಧಗಳಲ್ಲಿ ಅಮಿತ ಲಾಭ: ವಿದೇಶಿ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

ನವದೆಹಲಿ, ಮೇ 27– ಅಗ್ಗದಲ್ಲಿ ಮಾರಬಹುದಾದ ಔಷಧಿಗಳಿಂದ ವಿಪರೀತ ಲಾಭ ಗಳಿಸಲು ಬಹುರಾಷ್ಟ್ರೀಯ ಔಷಧಿ ಕಂಪನಿಗಳು ಯತ್ನಿಸಿದರೆ ಅವನ್ನು ಕೇಂದ್ರ ಸರ್ಕಾರ ‘ಉಗ್ರವಾಗಿ ಪರಿಗಣಿಸುವುದು’.

ಕೇಂದ್ರದ ಪೆಟ್ರೋಲಿಯಂ ಮತ್ತು ರಾಸಾಯನಿಕ ವಸ್ತುಗಳ ಸಚಿವ ಕೆ.ಡಿ. ಮಾಳವೀಯ ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಈ ಎಚ್ಚರಿಕೆ ನೀಡಿದರು.

ದಕ್ಷತೆಗೆ ಪ್ರಾಶಸ್ತ್ಯ: ಸಂಪುಟದ ಚರ್ಚೆ

ಬೆಂಗಳೂರು, ಮೇ 27– ಬಡ್ತಿಗೆ ಸೀನಿಯಾರಿಟಿ ಒಂದನ್ನೇ ಪರಿಗಣಿಸುವ ಪದ್ಧತಿ ಆಡಳಿತದ ಕತ್ತಿಗೆ ಬಿಗಿದ ಬೀಸುವ ಕಲ್ಲಾಗಿದೆ. ಅದರಿಂದ ಪಾರಾಗುವ ಬಗೆಯನ್ನು ಸರ್ಕಾರ ಆಲೋಚಿಸುತ್ತಿದೆ. ರಾಜ್ಯ ಸರ್ಕಾರಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ಇಂದಿರಾ ಗಾಂಧಿಯವರು ಕಳುಹಿಸಿರುವ ವ್ಯಾಪಕವಾದ ಟಿಪ್ಪಣಿಯನ್ನು ಕರ್ನಾಟಕದ ಮಂತ್ರಿಮಂಡಲ ಇಂದು ದೀರ್ಘವಾಗಿ ಚರ್ಚಿಸಿತು.

ADVERTISEMENT

ರಾಜ್ಯ ಸಚಿವರುಗಳು ಕೂಡ ಭಾಗವಹಿಸಿದ ಸಂಪುಟದ ಸಭೆಯ ನಂತರ ವರದಿಗಾರ ರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ದೇವರಾಜ ಅರಸು ಅವರು, ಸೀನಿಯಾರಿಟಿ ಮತ್ತು ಮೇಲಧಿಕಾರಿಗಳು ಕಳುಹಿಸುವ ರಹಸ್ಯ ವರದಿ ಬಗ್ಗೆ ಇಂದು ಚರ್ಚೆಯನ್ನು ಕೇಂದ್ರೀಕರಿಸಲಾಗಿತ್ತೆಂದೂ ದಕ್ಷತೆ ಹೆಚ್ಚಿಸುವ ಬಗ್ಗೆ ಚರ್ಚೆ ಇನ್ನೂ ಅಪೂರ್ಣವೆಂದೂ ತಿಳಿಸಿದರು.

ಬಡ್ತಿಗೆ ಸೀನಿಯಾರಿಟಿ ಜತೆಗೆ ಅಧಿಕಾರಿಯ ಕೆಲಸ ನಿರ್ವಹಣೆಯೂ ಆಧಾರವಾಗಬೇಕು ಎಂಬುದು ಹೊಸ ಆಲೋಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.