75 ವರ್ಷಗಳ ಹಿಂದೆ
ನವದೆಹಲಿ, ಆಗಸ್ಟ್ 11– ರಾಜನ ತಲೆಗೆ ಬದಲಾಗಿ ಅಶೋಕ ಸ್ತಂಭದ ಮುದ್ರೆಯನ್ನು ಹೊಂದಿದ ಹೊಸ ನಾಣ್ಯಗಳನ್ನು ಆಗಸ್ಟ್ 15ರಿಂದ ಜಾರಿಗೆ ತರಲಾಗುವುದು ಎಂದು ಭಾರತ ಸರ್ಕಾರದ ಅರ್ಥಶಾಖೆ ಪ್ರಕಟಿಸಿದೆ. ಕಾಲಾಣೆಯ ನಾಣ್ಯವನ್ನುಳಿದು ಎಲ್ಲಾ ನಾಣ್ಯಗಳ ತೂಕ, ಆಕಾರ ಮತ್ತು ರಚನೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ.
ನಾಣ್ಯದ ಇನ್ನೊಂದು ಮುಖದಲ್ಲಿಯೂ ಬದಲಾವಣೆ ಮಾಡಲಾಗಿದೆ. ರೂಪಾಯಿ, ಅರ್ಧ ರೂಪಾಯಿ, ನಾಲ್ಕಾಣೆಗಳಿಗೆ ‘ತೆನೆ’ಯ ಗುರುತನ್ನೂ, ಎರಡಾಣೆ ಒಂದಾಣೆ ಮತ್ತು ಅರ್ಧಾಣೆ ಹಾಗೂ ತಾಮ್ರದ ನಾಣ್ಯಗಳಿಗೆ ‘ಬಸವ’ನ ಗುರುತನ್ನೂ ಹಾಕಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.