75 ವರ್ಷಗಳ ಹಿಂದೆ
ಭಟ್ಕಲ್ ಬಳಿ ನೌಕಾ ನಿರ್ಮಾಣ
ಬೊಂಬಾಯಿ, ಆಗಸ್ಟ್ 10– ಉತ್ತರ ಕೆನರಾ ಜಿಲ್ಲೆಯ ಭಟ್ಕಲ್ ಬಂದರಿನ ಬಳಿ, ಒಂದು ನೌಕಾ ಕೇಂದ್ರವನ್ನು ಪ್ರಾರಂಭಿಸಲು ಬೊಂಬಾಯಿ ಸರ್ಕಾರದವರು ಐದು ಚದರ ಮೈಲಿ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಬೊಂಬಾಯಿ ಸರ್ಕಾರದವರು ಭಾರತ ಸರ್ಕಾರದೊಡನೆ ವ್ಯವಹಾರ
ನಡೆಸುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 10– ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿರುವುದಕ್ಕೆ ಆರ್ಥಿಕ ಪರಿಸ್ಥಿತಿಯೇ ಕಾರಣ. ರೈತರಿಂದ ಧಾನ್ಯಗಳನ್ನು ಕೊಳ್ಳುವ ಬೆಲೆಯನ್ನು ಇಳಿಸಿ ಹಣದ ವ್ಯಯವನ್ನು ಕಡಿಮೆ ಮಾಡಬಹುದಾಗಿದ್ದ ಮಾರ್ಗವನ್ನು ಅಧಿಕ ಆಹಾರೋತ್ಪತ್ತಿಗೆ ಧಕ್ಕೆ ಬರಬಾರದೆಂಬ ಕಾರಣದ ಮೇಲೆ ಸರ್ಕಾರ ಅನುಸರಿಸಿರಲಿಲ್ಲ ಎಂದು ಮುಖ್ಯಮಂತ್ರಿ ಕೆ. ಚೆಂಗಲ ರಾಯರೆಡ್ಡಿ ಇಂದು ಸಂಜೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.