ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, ನವೆಂಬರ್‌ 15, 1996

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 16:20 IST
Last Updated 14 ನವೆಂಬರ್ 2021, 16:20 IST
   
ವೈದ್ಯಕೀಯ ಶಿಕ್ಷಣ: ಷರತ್ತಿನ ಮೇಲೆ ಪ್ರವೇಶಕ್ಕೆ ಕೋರ್ಟ್ ಅನುಮತಿ

ಬೆಂಗಳೂರು, ನ. 14– ರಾಜ್ಯದ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ, ಅಭ್ಯರ್ಥಿಗಳಿಂದ ಅವಶ್ಯ ಬಿದ್ದಲ್ಲಿ ತಮ್ಮನ್ನು ಹೊರಕಳುಹಿಸಬಹುದೆಂಬ ಪ್ರಮಾಣ ಅಥವಾ ಒಪ್ಪಿಗೆ ಪತ್ರ ಪಡೆದು ಷರತ್ತಿನ ಮೇಲೆ ಪ್ರವೇಶ ನೀಡಬಹುದು ಎಂದು ಹೈಕೋರ್ಟ್ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.

ಅಂತಿಮವಾಗಿ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ ಸೀಟುಗಳನ್ನು ನಿಗದಿ ಮಾಡಿದ ನಂತರ, ಅದರಲ್ಲಿ ಪ್ರವೇಶ ಸಂಖ್ಯೆ ನಿಗದಿಗಿಂತ ಹೆಚ್ಚು ಇದ್ದಲ್ಲಿ ಅಷ್ಟು ಮಂದಿಯನ್ನು ಹೊರಕಳುಹಿಸಬೇಕು. ಅದಕ್ಕೆ ಪ್ರವೇಶ ಪಡೆದಿರುವವರ ಒಪ್ಪಿಗೆ ಇರಬೇಕು ಎಂದು ಸ್ಪಷ್ಟಪಡಿಸಿತು.

ADVERTISEMENT

ಸೌಂದರ್ಯ ಸ್ಪರ್ಧೆ ವಿರೋಧಿಗಳಿಗೆ ಕಾರಂತ ತರಾಟೆ

ಬೆಂಗಳೂರು, ನ. 14– ‘ವಿಶ್ವ ಸುಂದರಿ ಸ್ಪರ್ಧೆ ದೊಡ್ಡ ವಿಷಯವೇನಲ್ಲ. ಚಿಂತೆ ಮಾಡಬೇಕಾದ ಪ್ರಮುಖ ವಿಚಾರಗಳು ಬಹಳಷ್ಟಿವೆ’.

ನಗರದಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆ ಬಗ್ಗೆ ಕನ್ನಡದ ಹಿರಿಯ ಲೇಖಕ ಡಾ. ಕೆ.ಶಿವರಾಮ ಕಾರಂತ ಅವರು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಇದು.

‘ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಘೋರವಾದ ಕೆಲಸ ಅನ್ನಿಸುವುದಿಲ್ಲ. ನಮ್ಮ ಊರಲ್ಲಿ ಕ್ಯಾಬರೆ ನಡೆಯುತ್ತಿಲ್ಲವೆ? ಯಾರು ಏನು ಮಾಡಿದ್ದಾರೆ’ ಎಂದು ಕಾರಂತರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.