ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 2.11.1971

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 22:00 IST
Last Updated 1 ನವೆಂಬರ್ 2021, 22:00 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಷೆಲ್ ಮಳೆಗರೆಯುತ್ತಿದ್ದ ಪಾಕ್ಫಿರಂಗಿ ಸಾಲು– ಭಾರತದ ಪೆಟ್ಟಿಗೆ ಧ್ವಂಸ

ನವದೆಹಲಿ, ನ. 1– ಕಳೆದ ಹನ್ನೊಂದು ದಿನಗಳಿಂದ ತ್ರಿಪುರಾದ ಕಮಲಾಪುರ ಪಟ್ಟಣದ ಮೇಲೆ ಷೆಲ್‌ಗಳನ್ನು ಸತತವಾಗಿ ಹಾರಿಸುತ್ತಿದ್ದ ಪಾಕಿಸ್ತಾನಿ ಫಿರಂಗಿಗಳ ಬಾಯಿ ಮುಚ್ಚಿಸಲು ಭಾರತದ ಗಡಿ ಪಡೆಗಳು ಇಂದು ಪರಿಣಾಮಕಾರಿ ‘ಪ್ರತಿಕ್ರಮ’ ಕೈಗೊಂಡವು.

ಭಾರತ ಮತ್ತು ಪಾಕಿಸ್ತಾನದ ಪ್ರಸ್ತುತ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇದು ‘ಈ ಬಗೆಯ ಪ್ರಥಮ ಕಾರ್ಯಾಚರಣೆ’ ಎಂದು ವಕ್ತಾರರು ವಿವರಿಸಿದರು.

ADVERTISEMENT

ಹೆಚ್ಚು ಸಂಭ್ರಮ– ಸಡಗರದ ರಾಜ್ಯೋತ್ಸವ

ಬೆಂಗಳೂರು, ನ. 1– ಕರ್ನಾಟಕದ ಸಿರಿಭರಿತ ಪರಂಪರೆಯನ್ನು ಪ್ರದರ್ಶಿಸುವ ಹಲವಾರು ಮೆರವಣಿಗೆಗಳು, ನಾಡುನುಡಿಗಳ ಹಿರಿಮೆ ಸಾರುವ ಭಾಷಣಗಳು, ನಾನಾ ಕ್ಷೇತ್ರಗಳಲ್ಲಿ ಸೇವೆಗೈದವರಿಗೆ ರಾಜ್ಯದ ಪುರಸ್ಕಾರ, ಸಾಂಸ್ಕೃತಿಕ ಹಾಗೂ ಮನರಂಜನೆ
ಕಾರ್ಯಕ್ರಮಗಳು ಈ ಬಾರಿ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದವು.

ಬೆಳಿಗ್ಗೆ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ಮಕ್ಕಳ ಸಂಭ್ರಮದ ಮೇಳದಿಂದ ರಾತ್ರಿ ಬಹಳ ಹೊತ್ತಿನವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ ನಗರದ ನಾನಾ ಸಂಘ ಸಂಸ್ಥೆಗಳು ಕನ್ನಡ ನಾಡಿನ ಹದಿನೈದನೆಯ ಹುಟ್ಟುಹಬ್ಬವನ್ನು ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.