ADVERTISEMENT

50 ವರ್ಷಗಳ ಹಿಂದೆ | ಆಹಾರ ಧಾನ್ಯ ಆಮದು, ಪಡಿತರ ವ್ಯವಸ್ಥೆ ಇಲ್ಲ: ಅಹಮದ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 21:45 IST
Last Updated 9 ಆಗಸ್ಟ್ 2022, 21:45 IST
   

ಶ್ರೀ ಅರವಿಂದರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ

ನವದೆಹಲಿ, ಆಗಸ್ಟ್‌ 9– ಮಹರ್ಷಿ ಅರವಿಂದರ ಗೌರವಾರ್ಥವಾಗಿ ಅಂಚೆ – ತಂತಿ ಇಲಾಖೆಯು ಅವರ ಜನ್ಮದಿನ
ವಾದ ಆಗಸ್ಟ್‌ 15ರಂದು 20 ಪೈಸೆ ಮೌಲ್ಯದ ವಿಶೇಷ ಅಂಚೆ ಚೀಟಿಯನ್ನು ಮಾರಾಟಕ್ಕೆ ಬಿಡುಗಡೆ ಮಾಡಲಿದೆ. ಅಂಚೆ ಚೀಟಿಯಲ್ಲಿ ಮಹರ್ಷಿ ಅರವಿಂದರ ಸಂಕೇತವಿದೆ. ಈ ಸಂಕೇತದ ಸುತ್ತಲೂ ಸೂರ್ಯನ ಚಿತ್ರವಿದೆ. ಈ ಸೂರ್ಯನ
ಚಿತ್ರವು ಮಹರ್ಷಿ ಅರವಿಂದರ ಜ್ಞಾನದ ಪ್ರಭಾವ ವಲಯದ ಸೂಚಕವಾಗಿದೆ.

ಆಹಾರಧಾನ್ಯ ಆಮದು, ಪಡಿತರ ವ್ಯವಸ್ಥೆ ಇಲ್ಲ: ಅಹಮದ್‌

ADVERTISEMENT

ನವದೆಹಲಿ, ಆಗಸ್ಟ್‌ 9– ಅಭಾವ ಪರಿಸ್ಥಿತಿ ಮುಂದುವರಿಯುತ್ತಿದ್ದರೂ ಈ ವರ್ಷ ಪಡಿತರ ವ್ಯವಸ್ಥೆ ಜಾರಿಗೆ ತರುವುದಿಲ್ಲ ಮತ್ತು ವಿದೇಶಗಳಿಂದ ಆಹಾರಧಾನ್ಯ ಆಮದು ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್‌ ಅಲಿ ಅಹಮದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.