ADVERTISEMENT

50 ವರ್ಷಗಳ ಹಿಂದೆ: ಗುರುವಾರ 11 ಮೇ 1972

​ಪ್ರಜಾವಾಣಿ ವಾರ್ತೆ
Published 10 ಮೇ 2022, 23:00 IST
Last Updated 10 ಮೇ 2022, 23:00 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

1700 ವಿದ್ಯುತ್‌ ಮಗ್ಗಗಳು ಸ್ತಬ್ಧ: 7 ಸಹಸ್ರ ಕಾರ್ಮಿಕರಿಗೆ ನಿರುದ್ಯೋಗ;

ಬಿಜಾಪುರ, ಮೇ 11– ಬನಹಟ್ಟಿ, ರಬಕವಿ ಮತ್ತು ಮಹಲಿಂಗಪುರಗಳಲ್ಲಿರುವ ವಿದ್ಯುತ್‌ ಮಗ್ಗಗಳ ಕಾರ್ಖಾನೆಗಳು ಮುಚ್ಚಿದ್ದು, ಸುಮಾರು ಏಳು ಸಹಸ್ರ ಮಂದಿ ವಿದ್ಯುತ್‌ ಮಗ್ಗ ಕೆಲಸಗಾರರು ನಿರುದ್ಯೋಗಿಗಳಾಗಿದ್ದರೆ.

ಉದ್ಯೋಗ ಒದಗಿಸಿಕೊಡಬೇಕೆಂದು ಚಳವಳಿಯನ್ನೂ ಆರಂಭಿಸಿ ಅನೇಕರು ಉಪವಾಸಸತ್ಯಾಗ್ರಹವನ್ನೂ ಕೈಗೊಂಡಿದ್ದಾರೆ.

ADVERTISEMENT

ವಿದ್ಯುತ್‌ ಮಗ್ಗಗಳು ಸೀರೆ, ರವಿಕೆ ಮುಂತಾದ ಬಣ್ಣದ ಬಟ್ಟೆಗಳನ್ನು ತಯಾರಿಸಬಾರದೆಂದೂ, ಕೇವಲ ಬಿಳಿ ಬಟ್ಟೆಗಳನ್ನೇ ತಯಾರಿಸಬೇಕೆಂದೂ ಸರ್ಕಾರ ಆದೇಶ ನೀಡಿರುವುದರ ವಿರುದ್ಧ ಪ್ರತಿಭಟಿಸಿ 1700 ವಿದ್ಯುತ್‌ ಮಗ್ಗಗಳು ಕೆಲಸವನ್ನು ನಿಲ್ಲಿಸಿವೆ.

ರಾಜ್ಯದಲ್ಲಿ ಇನ್ನೊಂದು ವಿಶ್ವವಿದ್ಯಾಲಯ ಶೀಘ್ರದಲ್ಲೇ ಆರಂಭ

ಬೆಂಗಳೂರು, ಮೇ 10– ಮೈಸೂರು ರಾಜ್ಯದಲ್ಲಿ ನಾಲ್ಕನೇ ವಿಶ್ವವಿದ್ಯಾಲಯ ಶೀಘ್ರದಲ್ಲಿಯೇ ಜನ್ಮ ತಾಳಲಿದೆ.

ಇನ್ನೊಂದು ವಿಶ್ವವಿದ್ಯಾಲಯ ಅಗತ್ಯವಿದೆ ಎಂಬ ತತ್ವವನ್ನು ಬೆಂಗಳೂರು, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಒಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.